ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್

Upayuktha
0

ಕರ್ನಾಟಕ ತಂಡ ಚಾಂಪಿಯನ್ಸ್, ರಾಜ್ಯ ತಂಡದಲ್ಲಿ 6 ಆಳ್ವಾಸ್ ವಿದ್ಯಾರ್ಥಿಗಳು

ಆಳ್ವಾಸ್ ವಿದ್ಯಾರ್ಥಿಗಳಿಗೆ  ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ




ವಿದ್ಯಾಗಿರಿ:  ಮಹಾರಾಷ್ಪ್ರದ  ರಾಯಘಢ ಜಿಲ್ಲೆಯ ಕಾಮೋತೆಯಲ್ಲಿ ನಡೆದ  70 ನೇ ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ಚಾಂಪಿಯನ್ ಆಗಿದ್ದು, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.


ವಿಜೇತ ತಂಡದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ಮಂದಿ ಆಟಗಾರರು ಭಾಗವಹಿಸಿದ್ದರು. ರಾಜ್ಯ ತಂಡದ ನಾಯಕಿ ಮೇಘನಾ ಎಚ್. ಎಂ.,  ಪಲ್ಲವಿ ಬಿ. ಎಸ್., ಸಹನಾ ಎಚ್. ವೈ,  ಲಕ್ಷ್ಮಿ ದೇವಿ, ತನುಶ್ರೀ, ಗೀತಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.


ರಾಜ್ಯ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಆಳ್ವಾಸ್‌ನ ಪಲ್ಲವಿ ಬಿ.ಎಸ್. ಹಾಗೂ ಸಹನಾ ಎಚ್. ವೈ. ಅವರು ಅಖಿಲ ಭಾರತ ಬಾಲ್‌ಬ್ಯಾಡ್ಮಿಂಟನ್ ಫೆಡರೇಶನ್ ನೀಡುವ ‘ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ’ಗೆ ಭಾಜನರಾದರು.


ಲೀಗ್ ಹಂತದಲ್ಲಿ ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಆಂಧ್ರಪ್ರದೇಶ ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸಿದ ಕರ್ನಾಟಕ ನಾಕ್‌ಔಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತ್ತು. ಚಾಂಪಿಯನ್‌ಶಿಪ್‌ನಲ್ಲಿ 28 ರಾಜ್ಯ ತಂಡಗಳು ಭಾಗವಹಿಸಿದ್ದವು. ಸೆಮಿಫೈನಲ್ಲಿ ಕರ್ನಾಟಕ ತಂಡವು ಕೇರಳ ತಂಡವನ್ನು 25-35, 35-20, 35-30 ಅಂಕಗಳ ಅಂತರದಲ್ಲಿ ಸೋಲಿಸಿತ್ತು.


ಫೈನಲ್ ಪಂದ್ಯದಲ್ಲಿ ಕರ್ನಾಟಕವು ತಮಿಳುನಾಡು ತಂಡವನ್ನು 35-30, 31-35, 35-26 ಅಂಕಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.


ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ|  ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.  



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top