ಗೆಲುವಿನಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಿಂಹಪಾಲು

Upayuktha
0

 38ನೇ ಅಂತರ್ ವಿವಿ ಆಗ್ನೇಯ ವಲಯದ ಸಾಂಸ್ಕೃತಿಕ ಯುವಜನೋತ್ಸವ: ರನ್ನರ್ ಅಪ್



ಮೂಡುಬಿದಿರೆ: ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ನಡೆದ 38ನೇ  ಅಂತರ್ ವಿವಿ  ಆಗ್ನೇಯ ವಲಯದ ಸಾಂಸ್ಕೃತಿಕ ಯುವಜನೋತ್ಸವ - ‘ಕ್ರೆಸೆಂಡೋ’ದಲ್ಲಿ ಮಂಗಳೂರು ವಿವಿ ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸಂಗೀತ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳಿಸಿ, ಸಮಗ್ರ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಜಾನಪದ ವಾದ್ಯ ಮೇಳ ಪ್ರಥಮ, ಭಾರತೀಯ ಶಾಸ್ತ್ರೀಯ ಸ್ವರ ವಾದ್ಯ(ಬಾನ್ಸೂರಿ)ದಲ್ಲಿ ಪ್ರಥಮ,  ಸಮೂಹ ಗೀತೆಯಲ್ಲಿ ದ್ವಿತೀಯ, ಜಾನಪದ ನೃತ್ಯ (ಗುಂಪು) ದ್ವಿತೀಯ, ಶಾಸ್ತ್ರೀಯ ಗಾಯನ ವೈಯಕ್ತಿಕದಲ್ಲಿ ದ್ವಿತೀಯ, ಶಾಸ್ತ್ರೀಯ ನೃತ್ಯದಲ್ಲಿ ತೃತೀಯ, ಭಾರತೀಯ ಲಘು ಶಾಸ್ತ್ರೀಯ ಸಂಗೀತದಲ್ಲಿ ತೃತೀಯ, ಪಾಶ್ಚಾತ್ಯ ವಾದ್ಯ ವೈಯಕ್ತಿಕ- ಐದನೇ ಸ್ಥಾನ, ಪಾಶ್ಚಾತ್ಯ ಗಾಯನ ವೈಯಕ್ತಿಕ ಐದನೇ ಸ್ಥಾನ,  ಪಾಶ್ಚಾತ್ಯ ಗಾಯನ ಸಮೂಹ ಐದನೇ ಸ್ಥಾನ, ಏಕಾಂಕ ನಾಟಕದಲ್ಲಿ ಐದನೇ ಸ್ಥಾನ ಪಡೆದು ರನ್ರ‍್ಸ್ ಅಪ್ ಪಟ್ಟ ತನ್ನದಾಗಿಸಿಕೊಂಡಿತು.


ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಆಳ್ವಾಸ್ ವಿದ್ಯಾರ್ಥಿಗಳು

ಭಾರತೀಯ ಶಾಸ್ತ್ರೀಯ ಸ್ವರ ವಾದ್ಯ(ಬಾನ್ಸೂರಿ)ದಲ್ಲಿ ಸ್ವಯಂ ಪ್ರಕಾಶ ಪ್ರಭು ಪ್ರಥಮ, ಶಾಸ್ತ್ರೀಯ ಗಾಯನ ವೈಯಕ್ತಿಕದಲ್ಲಿ ಅಶ್ವಿಜ ಉಡುಪ ದ್ವಿತೀಯ, ಭಾರತೀಯ ಲಘು ಶಾಸ್ತ್ರೀಯ ಸಂಗೀತದಲ್ಲಿ ವಿಭಾ ನಾಯಕ್ ತೃತೀಯ, ಶಾಸ್ತ್ರೀಯ ನೃತ್ಯದಲ್ಲಿ ಶ್ರೇಯಾ ಜಿ. ತೃತೀಯ ಸ್ಥಾನ,  ಭಾರತೀಯ ಸಮೂಹ ಗೀತೆ ಎರಡನೇ ಸ್ಥಾನ, ಜಾನಪದ ವಾದ್ಯ ಮೇಳ ಪ್ರಥಮ, ಜಾನಪದ ನೃತ್ಯ(ಗುಂಪು)ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಮಾರ್ಚ 03 ರಿಂದ 07 ವರೆಗೆ ನೋಯ್ಡಾದ ಆ್ಯಮಿಟಿ ವಿವಿಯಲ್ಲಿ ನಡೆಯುವ  ರಾಷ್ಟ್ರ ಮಟ್ಟದ ಸ್ಪರ್ಧೆಗೆ  ಆಯ್ಕೆಯಾಗಿರುತ್ತಾರೆ. ಇವರು ಮಂಗಳೂರು ವಿವಿಯನ್ನು ಪ್ರತಿನಿಧಿಸಲಿದ್ದಾರೆ.  


ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top