ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಆಡಳಿತ ಕಛೇರಿಗೆ ಶಿಲಾನ್ಯಾಸ

Upayuktha
0


ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಸ್ಥಾನದ ವಠಾರದಲ್ಲಿ ಆಡಳಿತ ಕಛೇರಿಯ ನೂತನ ಕಟ್ಟಡದ ಶಿಲಾನ್ಯಾಸವನ್ನು ಮುಖ್ಯ ಅತಿಥಿಗಳಾದ ರಾಮ ಭಟ್ ಪತ್ತಡ್ಕ ಮತ್ತು ನಗರಸಭೆ ಸದಸ್ಯೆ ವಿದ್ಯಾ ಗೌರಿ ದಂಪತಿಗಳು (ಮ್ಹಾಲಕರು, ವಿಜಯಾ ಸುಪಾರಿ ಇಂಡಸ್ಟ್ರೀಸ್ ಪುತ್ತೂರು) ಇವರು ನ.8ರಂದು ನೆರವೇರಿಸಿದರು.


ವೈ. ಶಂಕರ ಭಟ್, ಒಕ್ಕೆತ್ತೂರು, ವಿಟ್ಲ (ಗೌರವ ಉಪಾಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ) ಇವರು ದೇವಸ್ಥಾನದ ಆವರಣ ಗೋಡೆಗೆ ಅಡಿಗಲ್ಲು ಹಾಕಿ ಚಾಲನೆ ನೀಡಿದರು.


ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ವೈ.ಶ್ಯಾಮ ಭಟ್, ಉಷಾ ಶಾಮ ಭಟ್, ವಾಸ್ತು ತಜ್ಞರಾದ ಬೆಳ್ಳಿಗೆ ನಾರಾಯಣ ಭಟ್, ಬಾಲಕೃಷ್ಣ ಕೆಕೆ ಕುಂಡಾಪು, ಡಾ. ವೈ.ವಿ. ಕೃಷ್ಣ ಮೂರ್ತಿ, ವೈ.ವಿ.ಸುಬ್ರಹ್ಮಣ್ಯ, ಮುರಳಿ ಮಾಣಿತ್ತೋಡಿ, ಸುಧಾ ಮಣಿತ್ತೋಡಿ, ಡಾ.ಅನ್ನಪೂರ್ಣೇಶ್ವರಿ ಏತಡ್ಕ, ಯುವ ಎಂಜಿನಿಯರ್ ಕಾರ್ತೀಕ ಮಹೇಂದ್ರ ಕೋಳಿಕ್ಕಜೆ ಉಪಸ್ಥಿತರಿದ್ದರು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ಸಂಯೋಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top