ಪೇಜಾವರ ಶ್ರೀಗಳು ಮನುವಾದಿ ಅಂದಿರೋ ಮುಖ್ಯಮಂತ್ರಿ ಸಿದ್ರಾಮಣ್ಣ ಮತ್ತು ಅವರ ಸರ್ಕಾರವೂ ಮನುವಾದಿಯೇ ಆಗಿದ್ದಾರೆ.
ಸಮಷ್ಟಿ ಹಿತದ ನೆಲೆಯಲ್ಲಿ ಮನುವಾದವನ್ನು ಪೇಜಾವರ ಶ್ರೀಗಳಂಥವರು ಧ್ವನಿಸಿದರೆ ಪಥ್ಯವಾಗುವ ನಿಮಗೆ ರಾಜಕೀಯ ಸ್ವಾರ್ಥಕ್ಕಾಗಿ ಜಾರಿಗೆ ತಂದಿರೋ ಗೃಹಲಕ್ಷ್ಮೀ, ಮಹಿಳೆಯರಿಗೆ ಉಚಿತ ಪ್ರಯಾಣದಂಥಹ ನಿಮ್ಮ ಯೋಜನೆಗಳು ಮನುವಾದವೇ ಆಗಿದೆ ಅನ್ನೋದು ಗೊತ್ತಿರಬೇಕು.
ಎಲ್ಲಿ ಸ್ತ್ರೀಯರನ್ನು ಗೌರವದಿಂದ ಕಾಣ್ತಾರೋ ಅಲ್ಲಿ ದೈವೀ ನೆಲೆ ಇರ್ತದೆ ಅಂದವರು ಮನು. ಅಲ್ಲಿ ಸಮಷ್ಟಿ ಹಿತದ ಆಶಯ ಇದೆ ಅದನ್ನು ತಪ್ಪು ಅನ್ನೋದಾದ್ರೆ ಗೃಹಲಕ್ಷ್ಮೀ, ಸ್ತ್ರೀಶಕ್ತಿಯಂಥ ಗ್ಯಾರಂಟಿ ಯೋಜನೆಗಳನ್ನೂ ತಪ್ಪು ಅನ್ಬೇಕಾಗ್ತದೆ. ಈ ಯೋಜನೆಗಳು ಮನುವಾದಕ್ಕೆ ಪೂರಕವಾಗಿಯೇ ಇವೆ. ಆದ್ದರಿಂದ ನೀವೂ ಮನುವಾದಿಗಳೇ ಆಗಿದ್ದೀರಿ ಅನ್ನೋದನ್ನು ಅರ್ಥ ಮಾಡ್ಕೊಳ್ಬೇಕು.
ನೀವು ಮಾತ್ರ ಅಲ್ಲ; ಕಾಂಗ್ರೆಸ್ ಸೇರಿದಂತೆ ಅನೇಕ ಗೋಸುಂಬೆ ರಾಜಕೀಯ ಪಕ್ಷಗಳು ಮತ್ತು ನೇತಾರರು ಪರೋಕ್ಷವಾಗಿ ಮನುವಾದವನ್ನು ಪುರಸ್ಕರಿಸಿಕೊಂಡೇ ರಾಜಕೀಯ ನಡೆಸ್ತಾ ಇರೋದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೆ. ಇಂಥ ಅನೇಕ ಉದಾಹರಣೆಗಳನ್ನು ಪಟ್ಟಿಮಾಡಬಹುದು. ಆದರೆ ನಿಮ್ಕ ಸೆಕ್ಯುಲರ್ ಮುಖವಾಡ ಕಳಚಿ ಬೀಳವ ಭಯದಲ್ಲಿ ಮನು ವಿರೋಧಿಗಳಂತೆ ವರ್ತಿಸ್ತಾ ಇರೋದು ನಿಮ್ಮ ರಾಜಕೀಯ ಕುತಂತ್ರದ ಭಾಗವಾಗಿದೆ. ಅದು ಸರಿಯಲ್ಲ.
ಆದ್ದರಿಂದ ಪೇಜಾವರ ಶ್ರೀಗಳನ್ನು ಟೀಕೆ ಮಾಡೋ ಮೊದಲು ನೀವೂ ಮನುವಾದಿಗಳೇ ಆಗಿದ್ದೀರಿ ಅನ್ನೋದನ್ನು ಆತ್ಮಾವಲೋಕನ ಮಾಡ್ಕೊಳ್ಳಿ.
- ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ