'ಸರೋಜ್ ಮಧು-ಕಲಾ ಉತ್ಸವ-2024': ಫಿಲೋಮಿನಾ ಪ.ಪೂ. ಕಾಲೇಜಿಗೆ ಹಲವು ಪ್ರಶಸ್ತಿ

Upayuktha
0


ಪುತ್ತೂರು: ಸರೋಜಿನಿ ಮಧುಸೂದನ ಕುಶೆ, ಶಿಕ್ಷಣ ಸಂಸ್ಥೆಗಳು ಆಯೋಜಿಸಿದ 'ಸರೋಜ್ ಮಧು - ಕಲಾ ಉತ್ಸವ - 2024' ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.


ಸಿಲಪ್ಪತಿಕಾರಂ ಭರತನಾಟ್ಯ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಅಂಗೀಕ ಶೆಟ್ಟಿ ಪ್ರಥಮ ಹಾಗೂ ದ್ವಿತೀಯ ಕಲಾ ವಿಭಾಗದ ವಿಷ್ಣುಪ್ರಿಯ ಕೆ. ವಿ ತೃತೀಯ ಸ್ಥಾನ ಮತ್ತು ಯುಗಳ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಕಾಲೇಜಿನ ಪ್ರಾಂಶುಪಾಲ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ನಿರ್ದೇಶಕಿ ಸುಮನಾ ರಾವ್, ರಶ್ಮಿ ಪಿ.ಎಸ್ ಹಾಗೂ ಭರತ್ ಜಿ. ಪೈ ಉಪಸ್ಥಿತರಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top