ನಿರಂತರ ಶೋಧಪ್ರಜ್ಞೆಯಿಂದ ಗುಣಮಟ್ಟದ ಬರಹ

Upayuktha
0

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರ



ಉಜಿರೆ; ನಿರಂತರ ಅಧ್ಯಯನ, ಹೊಸದನ್ನು ತಿಳಿದುಕೊಳ್ಳುವ ಹಂಬಲ ಮತ್ತು ವಿವಿಧ ಪ್ರಶ್ನೆಗಳನ್ನು ಮುಂದಿಟ್ಟು ಶೋಧನೆಗೆ ಮುಂದಾಗುವ ಸಾಮರ್ಥ್ಯದಿಂದ ಪ್ರಕಟಣಾಯೋಗ್ಯ ಸಂಶೋಧನಾ ಬರಹಗಳನ್ನು ಬರೆಯಲು ಸಾಧ್ಯ ಎಂದು ನಿಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಪ್ರಾಧ್ಯಾಪಕ ಡಾ.ಟಿ ಮಲ್ಲಿಕಾರ್ಜುನಪ್ಪ  ಅಭಿಪ್ರಾಯಪಟ್ಟರು.


ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ‘ಪ್ರಕಟಣಾಯೋಗ್ಯ ಸಂಶೋಧನಾ ಬರಹ ಬರೆಯುವ ವಿಧಾನಗಳು’ ಕುರಿತು ಆಯೋಜಿಸಿದ ಎರಡು ದಿನಗಳ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.


ಸ್ನಾತಕೋತ್ತರ ಅಧ್ಯಯನದಲ್ಲಿ ಪಠ್ಯವನ್ನು ಅಭ್ಯಸಿಸುವುದು ಮತ್ತು ಶೈಕ್ಷಣಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವುದು ಮಾತ್ರ ವಿದ್ಯಾರ್ಥಿಗಳ ಆಧ್ಯತೆಯಾದಲ್ಲಿ ಪದವಿ ಶಿಕ್ಷಣ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನದ ನಡುವೆ ಯಾವುದೇ ವ್ಯತ್ಯಾಸಗಳಿರುವುದಿಲ್ಲ.


ವಿದ್ಯಾರ್ಥಿಗಳು ಗಳಿಸಿದ  ಅಂಕಗಳಿಗಿAತ  ಪ್ರಕಟಿತ ಸಂಶೋಧನಾ ಬರಹಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ ಎಂದರು.


ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಸಂಶೋಧನಾ ಬರಹಗಳನ್ನು ಪ್ರಖ್ಯಾತ ನಿಯತಕಾಲಿಕೆಗಳಲ್ಲಿ ಪ್ರಕಟಿಸುವುದರ ಪ್ರಾಧಾನ್ಯತೆಯನ್ನು ಸ್ನಾತಕೋತ್ತರ ಪದವಿ ಅಧ್ಯಯನನಿರತ ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ಸಂಶೋಧನಾ ಬರಹಗಳು ವೃತ್ತಿಯಲ್ಲಿ ಉನ್ನತ ವೇತನ ಶ್ರೇಣಿಯನ್ನು ಪಡೆಯುವುದಕ್ಕೂ ನೆರವಾಗುತ್ತವೆ. ಸ್ನಾತಕೋತ್ತರ ಅಧ್ಯಯನನಿರತ ವಿದ್ಯಾರ್ಥಿಗಳು ಸಂಶೋಧನಾ ಬರಹಗಳನ್ನು ಪ್ರಕಟಿಸುವುದರ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು. 


ಸಂಪೂರ್ಣವಾಗಿ ಸಂಶೋಧನೆಯ ಆಳ-ಅಗಲಗಳನ್ನು ಅರಿಯುವುದಕ್ಕೆ ಬಹಳಷ್ಟು ಸಮಯ ಬೇಕಾಗುತ್ತದೆ. ನಿರಂತರ ಪರಿಶ್ರಮವು ಪ್ರಕಟಣಾಯೋಗ್ಯ ಸಂಶೋಧನಾ ಬರಹಗಳನ್ನು ಬರೆಯುವುದಕ್ಕೆ ಸಹಾಯಕವಾಗುತ್ತದೆ ಎಂದರು.


ಪ್ರಾAಶುಪಾಲ ಡಾ.ಬಿ.ಎ. ಕುಮಾರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ವಿಶೇಷ ಆಸಕ್ತಿಯೊಂದಿಗೆ ಸೃಜನಾತ್ಮಕ ಸಂಶೋಧನೆಗಳಿಗೆ ಅಗತ್ಯವಾದ ಸಹಕಾರ ಮತ್ತು ಪ್ರೋತ್ಸಾಹವನ್ನು ಒದಗಿಸುತ್ತಿದ್ದು, ಕೇವಲ ಪ್ರಾಧ್ಯಾಪಕರ ಸಂಶೋಧನೆಗಳಿಗೆ ‘ಸೀಡ್ ಮನಿ’ ರೂಪದಲ್ಲಿ ನೀಡುತ್ತಿದ್ದ ಧನ ಸಹಾಯವನ್ನು ಪ್ರಸಕ್ತ ಶೈಕ್ಞಣಿಕ ವರ್ಷದಿಂದ ವಿದ್ಯಾರ್ಥಿ ಸಂಶೋಧಕರಿಗೂ ವಿಸ್ತರಿಸಲಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಡೀನ್ ಡಾ. ವಿಶ್ವನಾಥ್ ಪಿ, ಹಾಗೂ ಕಾರ್ಯಕ್ರಮ ಸಂಚಾಲಕರಾದ ಡಾ. ಲಕ್ಷ್ಮೀ ನಾರಾಯಣ ಕೆ.ಎಸ್. ಮತ್ತು         ಡಾ. ನಾರಾಯಣ ಹೆಬ್ಬಾರ್ ಉಪಸ್ಥಿತರಿದ್ದರು.


ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳ ನಿರ್ದೇಶಕರಾದ ಡಾ. ಸೌಮ್ಯ ಬಿ.ಪಿ. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

 

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top