ಉಜಿರೆ: ಅಖಿಲ ಭಾರತೀಯ ಕಂಪನಿ ಸೆಕ್ರೆಟರಿ ಸಂಸ್ಥೆ ನಡೆಸಿದ ಕಂಪನಿ ಸೆಕ್ರೆಟರಿ ಪ್ರವೇಶ ಪರೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮೂಲಕ ಪರೀಕ್ಷೆ ಬರೆದ ಏಳೂ ವಿದ್ಯಾರ್ಥಿಗಳು ಸಹ ತೇರ್ಗಡೆ ಹೊಂದಿ ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಹಾಜರಾದ ರೋಹಿತ್, ಓಜಸ್ ಬಿ ಕದಂಬಿ, ಗೌತಮಿ ಶೆಟ್ಟಿ, ಅನನ್ಯಲಕ್ಷ್ಮೀ, ಪ್ರಾಪ್ತ ಪಿ. ಹೆಗ್ಡೆ, ಸಹನಾ ಆರ್. ಕುರ್ಲಿ ಹಾಗೂ ಕುಶಲ ತೇರ್ಗಡೆ ಹೊಂದಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಸಾಧಕರಿಗೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಹಾಗೂ ಉಪನ್ಯಾಸಕರು ಶುಭ ಹಾರೈಸಿದ್ಧಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ