ಕೆಲವರಿಗೆ ಪ್ರತಿಯೊಂದನ್ನೂ ಮುಂದೂಡುವಿಕೆಯ ಧೋರಣೆ ಇರುತ್ತದೆ. ಇಲ್ಲದ ನೆವ ಹೇಳಿ ಕೆಲಸವನ್ನು ಮುಂದೂಡಿ ಆಮೇಲೆ ಪರಿತಪಿಸುವ ಜನರನ್ನು ಕಾಣುತ್ತೇವೆ. ಆದ್ದರಿಂದ ಒತ್ತಡವನ್ನು ನಿಭಾಯಿಸಲು ಕೆಲಸವನ್ನು ಮಾಡಿ ಮುಗಿಸುವ ವಿವೇಕವಿದ್ದರೆ ಉತ್ತಮ.
ಒಳ್ಳೆಯ ಕೇಳುಗರಾಗಿ.
ಒಳ್ಳೆಯ ಕೇಳುಗರಾಗುವುದು ವ್ಯಕ್ತಿತ್ವದ ಉತ್ತಮ ಲಕ್ಷಣ. ಎಷ್ಟೋ ಸಾರಿ ನಮ್ಮ ನಮಸ್ಯೆಯ ಉತ್ತರ ಇನ್ನೊಬ್ಬರ ಮಾತುಗಳಲ್ಲಿ ಅಡಗಿರುತ್ತದೆ. ಆದ್ದರಿಂದ ಇನ್ನೊಬ್ಬರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವುದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿ ಒತ್ತಡದಿಂದ ಪಾರಾಗಬಹುದು.
ಡೊಂಟ್ ಕೇರ್ ಮಾಸ್ಟರ್ ಗಳಾಗಬೇಡಿ.
ಸಾಮಾನ್ಯವಾಗಿ ಕೆಲವರಿಗೆ ಇನ್ನೊಬ್ಬರ ಮಾತಿನ ಬಗ್ಗೆ ಉಡಾಫೆ ಮಾಡುವ ಅಭ್ಯಾಸ ಇರುತ್ತದೆ. ಯಾರಪ್ಪಂದೇನು ಗಂಟು ಎಂದು ಮಾತನಾಡುತ್ತಾ ವಿವಾದಗಳನ್ನು ಮೈ ಮೇಲೆ ಎಳೆದು ಕೊಂಡು ಒತ್ತಡಕ್ಕೆ ಸಿಗುವವರಿಗೇನು ಕಡಿಮೆ ಇಲ್ಲ. ವಾರ್ನಿಂಗ್ ಬೆಲ್ ಬಗ್ಗೆ ಕೇರ್ ಮಾಡದೆ ಹೋದರೆ ಪೀರಿಯಡ್ ಬೆಲ್ ಕೇಳಿಸಿಕೊಳ್ಳುವ ಸಂಭವ ಇರುತ್ತದೆ.
ಆದ್ದರಿಂದ ಉಡಾಫೆ ಮಾಡುವುದು ಬಿಟ್ಟರೆ ಎಷ್ಟೋ ಸಾರಿ ಎಷ್ಟೋ ಒತ್ತಡಗಳಿಂದ ಪಾರಾಗಬಹುದು. ಈ ದಿಕ್ಕಿನಲ್ಲಿ ಪ್ರಯತ್ನ ಇರಲಿ.
-ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ