ಸ್ಫೂರ್ತಿ ಸೆಲೆ: ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿ

Upayuktha
0


ಪ್ರತಿಯೊಬ್ಬರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ನಮ್ಮ ಮನಸ್ಥಿತಿ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ನಾವು ಜೀವನದಲ್ಲಿ ಯಶಸ್ಸನ್ನು ಪಡೆಯಲು ಅಥವಾ ಸೋಲು ಅನುಭವಿಸಲು ನಮ್ಮ ಮನಸ್ಥಿತಿಯೇ ಕಾರಣ.


ಮನಸ್ಸೆಂಬುದು ಒಂದು ಎಂಜಿನ್ ಇದ್ದಂತೆ. ನಮ್ಮ ಶರೀರದ ಚಟುವಟಿಕೆಗಳು, ನಾವು ಸಾಗುವ ಹಾದಿಯನ್ನು ನಮ್ಮ ಮನಸ್ಸೇ ನಿರ್ಧರಿಸುತ್ತದೆ. ನಾವು ಕಂಡ ಕನಸು ನನಸು ಆಗಬೇಕಾದರೆ ಮನಸ್ಸೇ ಮೂಲ ಕಾರಣ.


ಅಮಿತಾಭ್ ಬಚ್ಚನ್ ಇಳಿ ವಯಸ್ಸಿನಲ್ಲೂ ಮುಂಜಾನೆ 4 ಗಂಟೆಗೆ ಶೂಟಿಂಗ್‌ಗೆ ಸಿದ್ದರಾಗುವುದು, ವಿರಾಟ್ ಕೊಹ್ಲಿ ಮುಂಜಾನೆ 4 ಗಂಟೆಗೆ ಅಭ್ಯಾಸಕ್ಕೆ ತೊಡಗುವುದು, ಅವರ ಪರಿಶ್ರಮದ ಮನಸ್ಥಿತಿಯನ್ನು ತೋರಿಸುತ್ತದೆ.


ನಮ್ಮ ಜೀವನದಲ್ಲಿ ಎಷ್ಟೋ ಕಹಿ ಘಟನೆಗಳು ನಮ್ಮ ಮನಸ್ಥಿತಿಯನ್ನು ಘಾಸಿಗೊಳಿಸುತ್ತವೆ. ಇದು ಕ್ರಮೇಣ ನಮ್ಮ ಶರೀರದ ಮೇಲೂ ಪ್ರಭಾವವನ್ನು ಬೀರುತ್ತದೆ. ಅದಕ್ಕೇ ಇಂಗ್ಲಿಷಿನಲ್ಲಿ ಹೇಳುತ್ತಾರೆ "If you want to change the world, first change yourself". 


ಜಗತ್ತು ಬದಲಾಗಬೇಕೆಂದು ನಾವು ಬಯಸಿದರೆ ಮೊದಲು ನಾವು ಬದಲಾಗಬೇಕು. ಎನ್ನುವುದಕ್ಕಿಂತ ಮೊದಲು ನಾವು ನೋಡುವ ದೃಷ್ಟಿ, ನಮ್ಮ ಮನಸ್ಥಿತಿ ಬದಲಾಗಬೇಕು. "ಕಾಮಾಲೆ ಕಣ್ಣಿಗೆ ಜಗವೆಲ್ಲವು ಹಳದಿ" ಎಂದು. ಹೇಳುವಂತೆ ನಮ್ಮ ದೃಷ್ಟಿಗೆ, ನಾವು ತೆಗೆದು ಕೊಂಡ ನಿರ್ಧಾರಗಳಿಗೆ ನಮ್ಮ ನಮ್ಮ ಮನಸ್ಥಿತಿಯೇ ಕಾರಣ.


ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡರೆ ಮಾತ್ರ ನಮ್ಮ ನಿಂತ ನೀರಿನ ಜೀವನ ಹರಿಯುವ ನೀರಾಗಲು ಸಾಧ್ಯ. ಎಷ್ಟೋ ಸಾರಿ ಸುಲಭದ ಕೆಲಸಗಳು ಕಠಿಣವಾಗಿ ಮತ್ತು ಕಠಿಣದ ಕೆಲಸಗಳು ಸುಲಭವಾಗಿ ತೋರಲು ನಮ್ಮ ಮನಸ್ಥಿತಿಯೇ ಕಾರಣ. ಬದುಕೆಂಬ ವಾಹನವು ಗುರಿಯತ್ತ ಸಾಗಲು  ಉತ್ತಮ ಮನಸ್ಥಿತಿ ಎಂಬ ಎಂಜಿನ್ ಅಳವಡಿಸಿ ತೋರಿಸೋಣ. ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top