ಇಂದು 'ವಿಕಾಸ' ದಿಂದ ಸಾಧಕೋತ್ತಮರಿಗೆ ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Upayuktha
0


ಬೆಂಗಳೂರು: ಬೆಂಗಳೂರು ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ 'ವಿಕಾಸ' ವತಿಯಿಂದ ಸುವರ್ಣ  ಸಂಭ್ರಮ  ರಾಜ್ಯೋತ್ಸವ 2024 ಅನ್ನು ನ.30 ಶನಿವಾರ ಮಧ್ಯಾಹ್ನ 3:30 ಗಂಟೆಗೆ ಆಯೋಜಿಸಲಾಗಿದೆ.


ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಡಾ ಎಚ್ ಎಸ್  ಸುಧೀಂದ್ರ ಕುಮಾರ್ ವಹಿಸಲಿದ್ದು ಅಬಲಾಶ್ರಮದ ಕಾರ್ಯದರ್ಶಿ  ಭಾರತೀಶರಾವ್, ಜೆಕ್ ಗಣರಾಜ್ಯದ ಗೌರವ ರಾಯಭಾರಿ ಪುಷ್ಪಕ್ ಪ್ರಕಾಶ್, ಎಕೆಬಿಎಂಸ್ ಉಪಾಧ್ಯಕ್ಷ ಡಿ.ಟಿ ಪ್ರಕಾಶ್, ಪ್ರತಿಬಿಂಬ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮುರಳಿ ಬಿ ರಾವ್, ನಳಂದ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎಮ್ ಆರ್ ಶಿವಶಂಕರ್ ಅತಿಥಿಗಳಾಗಿ ಭಾಗ ವಹಿಸುವರು.


ಕಾರ್ಯಕ್ರಮದಲ್ಲಿ ಪತ್ರಿಕಾರಂಗದಲ್ಲಿ ಅವಿರತ ಸಾಧನೆ ಮಾಡಿರುವ ಸಾಧಕೋತ್ತಮರಾದ ಕೋಲಾರ ವಾಣಿ ದಿನಪತ್ರಿಕೆಯ ಸಂಪಾದಕ ಬಿಎನ್ ಮುರಳಿ ಪ್ರಸಾದ್, ಅಂಕಣಕಾರ್ತಿ ಅನುವಾದಕಿ ಮಾಧುರಿ ದೇಶಪಾಂಡೆ, ಸಂಯುಕ್ತ ಕರ್ನಾಟಕ ವರದಿಗಾರ ಗುರುರಾಜ್ ಕುಲಕರ್ಣಿ, ಸತ್ಯ ಕ್ರಾಂತಿಯ ಸಂಪಾದಕ ಮೋಹನ್ ಕುಲಕರ್ಣಿ ಮತ್ತು ಕಲ್ಪಾ ಡಿಜಿಟಲ್ ಮೀಡಿಯಾ ಸಂಪಾದಕ ಅನಿರುದ್ಧ ವಸಿಷ್ಠ ರವರುಗಳಿಗೆ ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು.


ಆರೋಹಣ ಸಂಸ್ಥೆಯ ಗಾಯಕ ಸುಧೀಂದ್ರ ಮತ್ತು ಸಂಪದ ಸಾಂಸ್ಕೃತಿಕ ವೇದಿಕೆಯ ಅಚ್ಯುತಾ ಸಂಕೇತಿ ರವರಿಂದ ವೈವಿಧ್ಯಮಯ ಗಾಯನ ಪ್ರಸ್ತುತಿ ಮತ್ತು ಸ್ಪೂರ್ತಿ ಹೆಚ್ ಯಾವಗಲ್ ರವರಿಂದ ಕಥಕ್ ನೃತ್ಯಆಯೋಜಿಸಲಾಗಿದೆ .


ವಾರ್ತಾ ಇಲಾಖೆ ನಿವೃತ್ತ ಅಧಿಕಾರಿ ಡಿಪಿ ಮುರಳಿಧರ, ಪತ್ರಕರ್ತ ಹೆಚ್. ಎಸ್ ದ್ವಾರಕನಾಥ್, ಹಿರಿಯ ಪತ್ರಿಕಾ ಛಾಯಾಗ್ರಹಾಕ ಶ್ರೀನಿವಾಸ ವೈ ಕೆ ರವರಿಗೆ ಸನ್ಮಾನ ವಿಕಾಸ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮತ್ತು 'ಕಲಾಕಾರ್' ಹಿಂದಿ ಚಿತ್ರದ ಟೀಸರ್ ಬಿಡುಗಡೆ  ನಡೆಯುವುದು ಎಂದು ವಿಕಾಸದ ಅಧ್ಯಕ್ಷ ಶ್ರೀನಾಥ  ಜೋಶಿ, ಪ್ರಧಾನ ಕಾರ್ಯದರ್ಶಿ ಹನುಮೇಶ ಯಾವಗಲ್ ಮತ್ತು ವಿಕಾಸ ಸಲಹಾ ಸಮಿತಿ ಮುಖ್ಯಸ್ಥ ಬಿಎ ಅರುಣ್ ತಿಳಿಸಿರುತ್ತಾರೆ. ವಿವರಗಳಿಗೆ 9844030946



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top