ಕೂಟ ಮಹಾ ಜಗತ್ತಿನಿಂದ ವಿದ್ಯಾರ್ಥಿ ವೇತನ ವಿತರಣೆ

Upayuktha
0


ಮಂಗಳೂರು: ಕೂಟ ಮಹಾ ಜಗತ್ತು ಮಂಗಳೂರು ಅಂಗ ಸಂಸ್ಥೆಯ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಇತ್ತೀಚೆಗೆ ವಿತರಿಸಲಾಯಿತು.


ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಘ್ನೇಶ್ ಕಾರಂತ್, ಮೈಟ್‌ನ ಬಿಇ ವಿದ್ಯಾರ್ಥಿನಿ ಸಂಜನಾ ಹೇರ್ಳೆ ಕೆ. ಅವರಿಗೆ ತಲಾ 25 ಸಾವಿರ ಸ್ಕಾಲರ್‌ಶಿಪ್ ನೀಡಲಾಯಿತು.


ಭವಿಷ್ಯದ ದಿನಗಳಲ್ಲಿ ಸಮುದಾಯದ ಪ್ರತಿಭಾವಂತ ಇನ್ನಷ್ಟು ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಕೂಟ ಜಗತ್ತು ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಹೇಳಿದರು.


ಕೂಟ ಜಗತ್ತು ಮಂಗಳೂರು ಅಂಗ ಸಂಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಸದಸ್ಯತ್ವ ಅಭಿಮಾನ ಆಗಬೇಕಿದೆ. ವ್ಯಾಪ್ತಿಯ ಎಲ್ಲರೂ ಸದಸ್ಯರಾಗುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕೆಲಸ ಆಗಬೇಕು ಎಂದು ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಹೇಳಿದರು.


ಸಂಘಟನಾ ಕಾರ್ಯದರ್ಶಿ ಕೃಷ್ಣಮಯ್ಯ, ಶಿವರಾಮಯ್ಯ, ಪದ್ಮನಾಭ ಮಯ್ಯ, ಮಹಿಳಾ ವೇದಿಕೆಯ ಪ್ರಭಾರಾವ್, ಲಲಿತಾ ಆರ್.ಉಪಾಧ್ಯಾಯ, ಶಶಿಪ್ರಭಾ ಐತಾಳ್, ಸುಮತಿ ಕೋರಿಯಾ, ಅನುರಾಧ, ಅನುಪಮಾ ಮೊದಲಾದವರು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
To Top