ರಾಯಗಢ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಲಕ್ಷ್ಮೀಶ ಪೂಜಾರಿ ನೇಮಕ

Upayuktha
0


ಬಂಟ್ವಾಳ: ಮಹಾರಾಷ್ಟ್ರ ರಾಜ್ಯ ಮುಂಬೈ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಹಾಗೂ ಬಿಜೆಪಿ ಮುಖಂಡ ಸಂತೋಷ ಜಿ ಶೆಟ್ಟಿ ದಳಂದಿಲ, ಬಂಟ್ವಾಳ ಹಾಗೂ ನ್ಯೂ ಪನ್ವೆಲ್ ಶಾಸಕ ಪ್ರಶಾಂತ್ ಠಾಕೂರ್ ಶಿಫಾರಸ್ಸಿನ ಮೇರೆಗೆ ಮಹಾರಾಷ್ಟ್ರದ ರಾಯಗಢ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಮೂಲತಃ ಮಂಗಳೂರು ತಾಲೂಕು ಮುತ್ತೂರು ತಾರೆಮಾರ್ ನಿವಾಸಿಯಾಗಿರುವ ಲಕ್ಶ್ಮೀಶ (ಸುಜಿತ್) ಪೂಜಾರಿ ಪನ್ವೆಲ್ ರವರು ನೇಮಕವಾಗಿರುತ್ತಾರೆ.


ಮಹಾರಾಷ್ಟ್ರ ಚುನಾವಣೆ: ಪನ್ವೇಲ್‌ನಲ್ಲಿ ಕನ್ನಡಿಗರಿಂದ ಮತಯಾಚನೆ

ಮಹಾರಾಷ್ಟ್ರ ರಾಜ್ಯ ವಿಧಾನ ಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೆತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಹಾಲಿ ಶಾಸಕ ಪ್ರಶಾಂತ್ ಠಾಕೂರ್ ರವರ ಪರವಾಗಿ ರಾಯ್ ಘಡ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಲಕ್ಶ್ಮೀಶ (ಸುಜೀತ್) ಪೂಜಾರಿ ನೇತೃತ್ವದಲ್ಲಿ ಪನ್ವೆಲ್ ಪೇಟೆಯಲ್ಲಿ ಮನೆ ಸಂಪರ್ಕ ಮಾಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯದರ್ಶಿ ಪ್ರಭಾಕರ ಪ್ರಭು, ಕರ್ಪೆ ಶಕ್ತಿ ಕೇಂದ್ರ ಪ್ರಮುಖ್ ತೇಜಸ್ ಪೂಜಾರಿ, ಪ್ರಮುಖರಾದ ನವೀನ ಪೂಜಾರಿ ಕರ್ಪೆ, ಸದಾನಂದ ಪೂಜಾರಿ ಕರ್ಪೆ, ತೇಜಸ್ವಿನಿ ಲಕ್ಶ್ಮೀಶ ಪೂಜಾರಿ ಪನಿವೆಲ್, ಅಡ್ವಕೇಟ್ ಸವೀನಾ ಬಂಗೇರ ಪನಿವೆಲ್, ಶಿವದಾಸನ್ ಪನಿವೆಲ್, ಸರಸ್ವತಿ ಪನಿವೆಲ್, ಮತ್ತಿತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top