ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದ್ಧಾರ ಮತ್ತು ಪುನರ್ ನಿರ್ಮಾಣ ಯೋಜನೆಯ ಭಾಗವಾಗಿ ದೇವರ ಬಾಲಾಲಯ ಪ್ರತಿಷ್ಠೆ ಕಾರ್ಯ ನವೆಂಬರ್ 20ರಂದು ನಡೆಯಲಿದೆ.
ನ.18ರ ಸೋಮವಾರ ಸಂಜೆ 6ರಿಂದ ದೇವತಾ ಪ್ರಾರ್ಥನೆ ಪ್ರಸಾದ ಶುದ್ಧಿ ರಕ್ತೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಾಲಲಿಂಗ ಜಲಾಧಿವಾಸ. ನ. 19ರ ಮಂಗಳವಾರ ಪ್ರಾತಃ ಗಂಟೆ 7ರಿಂದ ಗಣಪತಿ ಹೋಮ, ಕ್ಷಾಳನಾದಿ ಬಿಂಬಶುದ್ಧಿ, ಶ್ರೀ ದೇವರಿಗೆ 49 ಕಲಶ ಪ್ರಧಾನಹೋಮ, ಆನುಜ್ಞಾ ಕಲಶಾಭಿ಼ಷೇಕ, ಅನುಜ್ಞಾ ಬಲಿ, ಅನುಜ್ಞಾ ಪ್ರಾರ್ಥನೆ, ಶಯ್ಯಪೂಜೆ, ನಿದ್ರಾಕುಂಭ ಪೂಜೆ. ಸಂಜೆ ಗಂಟೆ 6ರಿಂದ ಬಾಲಲಿಂಗ ಬಿಂಬ ಶುದ್ಧಿ ಪ್ರಕ್ರಿಯೆ, ದ್ಯಾನಾಧಿವಾಸ, ಶಿರಸ್ತತ್ವ ಹೋಮ, ಆಧಿವಾಸ ಹೋಮ ನೆರವೇರಲಿದೆ.
ನ. 20ರಂದು ಬುಧವಾರ ಪ್ರಾತಃ ಗಂಟೆ 7ರಿಂದ ಸಂಹಾರತತ್ವ ಹೋಮ, ಸಂಹಾರತತ್ವ ಕಲಶ, ಕಲಾಶಾಭಿಷೇಕ ಸಂಕೋಚ ಪ್ರಕ್ರಿಯೆ, ಜೀವಕಲಶ ಪೂಜೆ, ಜೀವೋದ್ವಾಸನೆ. ಪೂರ್ವಾಹ್ನ 11.30ಕ್ಕೆ ನಡೆಯುವ ಮಕರಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ