ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 & 2 ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಮಂಗಳೂರು ಇವರ ಸಹಯೋಗದೊಂದಿಗೆ (vigilance awareness week) ಜಾಗೃತಿ ಅರಿವು ಸಪ್ತಾಹ-2024 ಈ ಕಾರ್ಯಕ್ರಮವನ್ನು ಪುಂಜಾಲಕಟ್ಟೆಯ ವಿಶ್ವಕರ್ಮ ಸಭಾಭವನದಲ್ಲಿ ದೀಪ ಬೆಳಗಿಸುವುದರ ಮೂಲಕ ಅ.28ರಂದು ಆರಂಭಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡದ ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ಇವರು ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಾಗೂ ಅದರ ವಿವಿಧ ರೂಪಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಭ್ರಷ್ಟಾಚಾರವು ಹೇಗೆಲ್ಲಾ ನಡೆಯುತ್ತೆ ಮತ್ತು ಅದನ್ನು ಯಾವ ರೀತಿಯಲ್ಲಿ ತಡೆಯಬಹುದು ಎಂಬುದನ್ನು ತಿಳಿಸಿಕೊಟ್ಟರು.
ಲೋಕಾಯುಕ್ತ ಪೊಲೀಸ್ ಠಾಣೆ ಮಂಗಳೂರು ಇವರ ಸಹಯೋಗದೊಂದಿಗೆ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 23 ಅಕ್ಟೋಬರ್ 2024 ರಂದು ನಡೆಸಲಾಗಿದ್ದು ಇದರ ಬಹುಮಾನ ವಿತರಣೆಯನ್ನು ಡಿವೈಎಸ್ಪಿ ಅವರು ನಡೆಸಿಕೊಟ್ಟರು. ಪ್ರಬಂಧ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಕೌಶಿಕ್ ಎಸ್. ಎ ದ್ವಿತೀಯ ಬಿ.ಕಾಂ, ಎರಡನೇ ಬಹುಮಾನ ರಮ್ಯಾ ತೃತೀಯ ಬಿ.ಬಿ.ಎ, ಮೂರನೇ ಬಹುಮಾನ ಶ್ರೇಯಾ ಪ್ರಥಮ ಬಿ.ಕಾಂ. ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಆದರ್ಶ್ ದ್ವಿತೀಯ ಬಿ.ಕಾಂ, ಎರಡನೇ ಬಹುಮಾನ ಲಕ್ಷಿತಾ ದ್ವಿತೀಯ ಬಿ.ಕಾಂ, ಮೂರನೇ ಬಹುಮಾನ ಶ್ರೀನಿಧಿ ನಾಯಕ್ ತೃತೀಯ ಬಿ.ಕಾಂ. ನಂತರ ನವ್ಯಶ್ರೀ ತೃತೀಯ ಬಿಎ ಮತ್ತು ಶ್ರೀನಿಧಿ ನಾಯಕ್ ತೃತೀಯ ಬಿ.ಕಾಂ ಇವರು ಈ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಧವರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಐಕ್ಯೂಎಸಿ ಸಂಚಾಲಕಿ ಪ್ರೊ. ಅವಿತಾ ಮರಿಯ ಕ್ಯಾಡ್ರಾಸ್, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ. ಸಂತೋಷ್ ಪ್ರಭು ಮತ್ತು ಪ್ರೊ.ಚಿತ್ರಾ ಪಡಿಯಾರ್ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ