ಗೋಕರ್ಣ: ಶ್ರೀ ಭದ್ರಕಾಳಿ ಕಾಲೇಜಿನ ವಿದ್ಯಾರ್ಥಿಗಳಿಂದ ತಾದ್ರಿ ಬಂದರು ಸ್ವಚ್ಛತಾ ಕಾರ್ಯಕ್ರಮ

Upayuktha
0


ಗೋಕರ್ಣ: ಸ್ವಚ್ಛತಾ ಪಕ್ವಾಡ 2024 ರ ಅಂಗವಾಗಿ, MPEDA- NETFISH ಕರಾವಳಿ ಭದ್ರತಾ ಪೊಲೀಸ್, ಮೀನುಗಾರಿಕೆ ಇಲಾಖೆ, ಗೋಕರ್ಣ ಗ್ರಾಮ ಪಂಚಾಯತ್, ಗೋಕರ್ಣದ ಶ್ರೀ ಭದ್ರಕಾಳಿ ಕಾಲೇಜಿನ NSS ಮತ್ತು NCC ಘಟಕಗಳು ಮತ್ತು ಮೀನುಗಾರರ ಒಕ್ಕೂಟಗಳ ಸಹಯೋಗದೊಂದಿಗೆ ತಾದ್ರಿಯಲ್ಲಿ ಬಂದರು ಸ್ವಚ್ಛತಾ ಕಾರ್ಯಕ್ರಮವನ್ನು ಗುರುವಾರದಂದು  ನಡೆಸಲಾಯಿತು.


ಕಾರ್ಯಕ್ರಮವನ್ನು ಯೋಗೀಶ್ ನಾಯಕ್, ಕರಾವಳಿ ಭದ್ರತಾ ಪೊಲೀಸ್, ರವೀಂದ್ರ ತಳೇಕರ್, ಡಿಡಿ ಮೀನುಗಾರಿಕೆ, ಡಾ. ಮಹಾಂತೇಶ ಹೂಗಾರ್, ಪಿಎಚ್‌ಸಿ, ಗೋಕರ್ಣ, ಪ್ರೊ. ರಾಮಮೂರ್ತಿ ನಾಯಕ್ ಮತ್ತು ನಾರಾಯಣ ಕೆ.ಎ, ಎಸ್‌ಸಿಒ, ಎಂಪಿಇಡಿಎ-ನೆಟ್‌ಫಿಶ್ ಜಂಟಿಯಾಗಿ ಉದ್ಘಾಟಿಸಿದರು.


ಭದ್ರಕಾಳಿ ಪಿಯು ಕಾಲೇಜಿನ ಪ್ರೊ. ಪಲ್ಲವಿ ಹೆಗಡೆ ನೇತೃತ್ವದಲ್ಲಿ ಸ್ವಚ್ಛತಾ ಪ್ರತಿಜ್ಞೆ ನಡೆಯಿತು. ಸುಮಾರು 760 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು, ಚೂರುಗಳು ಮತ್ತು ಬಲೆ ತುಂಡುಗಳನ್ನು ಭಾಗವಹಿಸಿದವರು ಸಂಗ್ರಹಿಸಿ ಗೋಕರ್ಣ ಗ್ರಾ.ಪಂ.ಗೆ ಸುರಕ್ಷಿತ ವಿಲೇವಾರಿಗೆ ಹಸ್ತಾಂತರಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top