ಪಣಜಿ (ಮಡಗಾಂವ): ಜನವರಿ ತಿಂಗಳಲ್ಲಿ ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಧರ್ಮಜಾಗೃತಿ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ಗೋವಾದ ಪಣಜಿಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಲಾಯಿತು.
ಮಡಗಾಂವ ಕೇಂದ್ರ ಕಮಿಟಿಯ ಅಧ್ಯಕ್ಷ ಜಯಶ್ರೀ ಶಂಕರ ಹೊಸ್ಮನಿ ರವರ ನೇತೃತ್ವದಲ್ಲಿ ಸಭೆ ಸೇರಿ ಕಾಶಿ ಮಹಾಸನ್ನಿಧಿಯವರ ದಿವ್ಯ ಸಾನಿಧ್ಯದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ ಮಾಡಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಜಯಶ್ರೀ ಹೊಸ್ಮನಿಯವರು ಮಾತನಾಡಿ- ಗೋವಾದಲ್ಲಿ ವೀರಶೈವ ಲಿಂಗಾಯತರಿಗೆ ಧರ್ಮ ಜಾಗೃತಿ ಮೂಡಿಸಲು ನಾವು ಈ ಬಾರಿ ವಿಶೇಷವಾಗಿ ಲಿಂಗದೀಕ್ಷೆ, ಮಂತ್ರ ದೀಕ್ಷೆ, ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದರು. ಇದಕ್ಕೆ ಶಾಖಾ ಕಮಿಟಿಗಳಾದ ಜುವಾರಿ ನಗರದ ಅಧ್ಯಕ್ಷರು ರುದ್ರಯ್ಯಸ್ವಾಮಿ ಹಿರೇಮಠ, ಪಣಜಿ ಅಧ್ಯಕ್ಷರಾದ ಸುರೇಶ ಕಣವಿ, ಪೊಂಡಾ ಅಧ್ಯಕ್ಷರಾದ ಸ್ಮೀತಾ ಸಿರಗಣ್ಣವರ್, ಬಿಚೋಲಿಯ ಅಧ್ಯಕ್ಷರಾದ ಬಸವರಾಜ ಹಿಪ್ಪರಗಿ ಹಾಗೂ ಬಸುರೆಡ್ಡೆಪ್ಪಾ ಅಬ್ಬಿಗೇರಿ ರವರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ಕೇಂದ್ರ ಕಮಿಟಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಮಲ್ಲಿಕಾರ್ಜುನ ಫರ್ತಾಬಾದ್ ಮಾತನಾಡಿ- ಈ ಕಾರ್ಯಕ್ರಮದಲ್ಲಿ ಧರ್ಮಜಾಗೃತಿಗಾಗಿ ನಾವು ವೀರಶೈವ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು, ಶರಣರ ವಚನ ಸಾಹಿತ್ಯವನ್ನು ಅರಿತಂತಹ ವಾಗ್ಮಿಗಳನ್ನು ಕರೆದು ಉಪನ್ಯಾಸ ಮಾಡಿಸಬೇಕು ಎಂದರು.
ಪಣಜಿಯ ದೀಪಕರಾಜ ಕುಡಚಿಮಠ ರವರು ಮಾತನಾಡಿ- ನಾವು ನಮ್ಮ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸಬೇಕು ಎಂಬ ಸಲಹೆ ನೀಡಿದರು. ಮಡಗಾಂವನ ಭೀಮನಗೌಡ ಪಾಟೀಲ್ ಮಾತನಾಡಿ- ನಾವು ಯಾವುದೇ ಕಾರ್ಯಕ್ರಮಗಳನ್ನು ಮಾಡಲಿ, ಅದರಲ್ಲಿ ಸ್ವಲ್ಪ ಸ್ವಲ್ಪ ಹಣ ಉಳಿಸಿ ನಾವು ನಮ್ಮದೇ ಸಮಾಜದ ಜಾಗ ಖರೀದಿಸಿ ಧರ್ಮದ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುವಂತೆ ಮಾಡೋಣ ಎಂದರು.
ಬಿಚೋಲಿ, ಸಾಖಳಿಯ ಸದಸ್ಯರಾದ ಬಸವರಾಜ ಗೋಡಗೇರಿ, ಸಂಗಪ್ಪ ಕುರಿ ಮಾತನಾಡಿ- ನಾವು ಹೊಸದಾಗಿ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಿ ಅವರಿಗೆ ಲಿಂಗ ದೀಕ್ಷೆ ತೆಗೆದುಕೊಳ್ಳಲು ಅನುವು ಮಾಡಿಕೊಡುವುದಾಗಿ ವಾಗ್ದಾನ ನೀಡಿದರು. ಈ ಸಂದರ್ಭದಲ್ಲಿ ಮಲ್ಲಪ್ಪಾ ಕೋರಿ, ಚೆನ್ನಬಸಪ್ಪಾ ಪಡಗದ, ಮಹೇಶ ಆಲೂರು, ಸಿದ್ಧನಗೌಡ ಗೌಡರ್, ಮುತ್ತು ಕಾಮತ್, ಸಂಜಯ ಸಿರಗಣ್ಣವರ್, ಸೇರಿದಂತೆ ಇತರ ಸಂಘ ಸಂಸ್ಥೆಯ ಗಣ್ಯರು ಕೂಡ ಉಪಸ್ಥಿತರಿದ್ದರು.
ಜಯಶ್ರೀ ಹೊಸ್ಮನಿ ಸ್ವಾಗತಿಸಿದರು, ಸ್ಮೀತಾ ಸಿರಗಣ್ಣವರ್ ಪ್ರಾರ್ಥನೆಗೈದರು, ಸಂಗೀತಾ ಚಪರೆ ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ