ಲಮಾಣಿ ಸಮುದಾಯಕ್ಕೆ ಅವಮಾನ: ಪ್ರತಿಮಾ ಕುಟಿನ್ಹೊ ವಿರುದ್ಧ ದೂರು

Upayuktha
0


ಪಣಜಿ (ವಾಸ್ಕೊ): ಗೋವಾದ ಸಾಮಾಜಿಕ ಕಾರ್ಯಕರ್ತೆ ಪ್ರತಿಮಾ ಕುತಿನ್ಹೊ ರವರು ಲಮಾಣಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅನುಷಾ ಲಮಾಣಿ ರವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಗೋವಿಂದ ಲಮಾಣಿ ರವರು ಬಂಜಾರ ಸಮಾಜದ ಸಮುದಾಯದ ಇತರ ಸದಸ್ಯರೊಂದಿಗೆ ಮಂಗಳವಾರ ವೆರ್ಣಾ ಪೋಲಿಸ್ ಠಾಣೆಯಲ್ಲಿ ಪ್ರತಿಮಾ ಕುತಿನ್ಹೊ ವಿರುದ್ಧ ದೂರು ದಾಖಲಿಸಿದ್ದಾರೆ.  


ವಾಸ್ಕೊ ಸಾಂಕೋಲಾ ಪಂಚಾಯತನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕುತಿನ್ಹೊ ನೀಡಿದ ಹೇಳಿಕೆ ಬಗ್ಗೆ ಗೋವಿಂದ ಲಮಾಣಿ ಬೇಸರ ವ್ಯಕ್ತಪಡಿಸಿದ್ದಾರೆ. ಸಾಂಕೋಲಾ ಪಂಚಾಯತನಲ್ಲಿ ಎಲ್ಲಾ ಲಮಾಣಿಗಳೇ ಇದ್ದಾರೆ ಎಂದು ಪ್ರತಿಮಾ ಕುತಿನ್ಹೊ ನೀಡಿದ ಹೇಳಿಕೆಯಿಂದ ನಮಗೆ ತುಂಬಾ ನೋವಾಗಿದೆ. ನಮ್ಮನ್ನು ನಕಾರಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ಗೋವಿಂದ ಲಮಾಣಿ ಬೇಸರ ವ್ಯಕ್ತಪಡಿಸಿದ್ದಾರೆ.


ಪಂಚಾಯತ ಚುನಾವಣೆಯಲ್ಲಿ ಗೆದ್ದಿರೋರು ಇಲ್ಲಿಗೆ ಬರ್ತಾರೆ. ನನ್ನ ಹೆಂಡತಿಯನ್ನು ಅವಮಾನಿಸಲು ಮತ್ತು ಅವರ ಜಾತಿಯ ಬಗ್ಗೆ ಟೀಕೆ ಮಾಡಿದ್ದಾರೆ. ಇಂತಹ ಟೀಕೆಯನ್ನು ಪ್ರತಿಮಾ ರವರು ಎರಡನೇಯ ಬಾರಿ ಮಾಡಿದ್ದನ್ನು ಕೇಳುತ್ತಿದ್ದೇನೆ. ಇದರಿಂದಾಗಿ ಇದೀಗ ಪೋಲಿಸ್ ದೂರು ದಾಖಲಿಸುತ್ತಿದ್ದೇನೆ ಎಂದು ಗೋವಿಂದ ಲಮಾಣಿ ನುಡಿದರು.

     

ಪ್ರತಿಮಾ ಕುತಿನ್ಹೊ ರವರ ಹೇಳಿಕೆಯನ್ನು ರಾಷ್ಟ್ರೀಯ ಬಂಜಾರ ಪರಿಷತ್ ಭಾರತ ಉಪಾಧ್ಯಕ್ಷ ಸುರೇಶ್ ರಜಪೂತ್ ಖಂಡಿಸಿದ್ದು, ಕುತಿನ್ಹೊ ರವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಗೋವಾದಲ್ಲಿ ನಾವೆಲ್ಲರೂ ಒಟ್ಟಾಗಿ ಶಾಂತಿಯುತವಾಗಿ ವಾಸಿಸುತ್ತಿದ್ದೇವೆ. ಆದರೆ ನಮ್ಮ ಜಾತಿಯ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅವರ ಈ ನಡವಳಿಕೆಯು ಸ್ವೀಕಾರಾರ್ಹವಲ್ಲ. ಒಬ್ಬ ಚುನಾಯಿತ ಪ್ರತಿನಿಧಿಯ ಬಗ್ಗೆ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ನಮ್ಮ ಸಮುದಾಯವನ್ನೇ ಅಗೌರವದಿಂದ ಕಾಣುವುದನ್ನು ನಾವು ಸಹಿಸುವುದಿಲ್ಲ. ಪ್ರತಿಮಾ ಕುತಿನ್ಹೊ ರವರು ಅನುಷಾ ಲಮಾಣಿ ರವರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಘ್ರಹಿಸಿದರು.


ಪಿಐ ಮೆಲ್ಸನ್ ಕೋಲಾ ರವರ ಮೇಲ್ವಿಚಾರಣೆಯಲ್ಲಿ ಮತ್ತು ಮುರರ್ಗಾಂವ ಡಿವೈಎಸ್ ಪಿ ಗುರುದಾಸ ಕದಂ ರವರ ಮಾರ್ಗದರ್ಶನದಲ್ಲಿ ವೆರ್ಣಾ ಪೋಲಿಸ್ ಠಾಣೆಯ ಪಿಎಸ್ ಐ ಆನಂದ ಗಾವ್ಕರ್ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.


ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುವ ಸಂದರ್ಭದಲ್ಲಿ ಅಖಿಲ ಗೋವಾ ಬಂಜಾರ ಸಮಾಜದ ಅಧ್ಯಕ್ಷರು ಆನಂದ ಅಂಗಡಿ ಮತ್ತು ಇತರ ಬಂಜಾರ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top