ಮಂಗಳೂರು: ಕೆನರಾ ಕಾಲೇಜಿನ ಬೌದ್ಧಿಕ ಸ್ವತ್ತು ಹಕ್ಕು (IPR) ಸೆಲ್ ಬಿಬಿಎ ಮತ್ತು ಬಿಸಿಎ ವಿದ್ಯಾರ್ಥಿಗಳಿಗಾಗಿ "ಆತ್ಮವಿಶ್ವಾಸದಿಂದ ನಾವೀನ್ಯತೆ: ಐಪಿಆರ್ ಮೂಲಭೂತಗಳು ಮತ್ತು ಉತ್ತಮ ಪದ್ದತಿಗಳು" ಎಂಬ ವಿಷಯದ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತ್ತು. ಕಾರ್ಯಾಗಾರವು ಬೌದ್ಧಿಕ ಸ್ವತ್ತು ಹಕ್ಕುಗಳ ಅರಿವು ಮೂಡಿಸಲು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಪದ್ದತಿಗಳನ್ನು ಅರ್ಥಮಾಡಿಕೊಡಲು ಸುವರ್ಣಾವಕಾಶ ಒದಗಿಸಿತು.
ಮಂಗಳೂರು ಸಂತ ಅಲೋಶಿಯಸ್ ಡೀಮ್ಡ್ ಟು ಬಿ ಯುನಿವರ್ಸಿಟಿ ಕಾಲೇಜಿನ ಸಹಪ್ರಾಧ್ಯಾಪಕ ಹಾಗೂ ಪರೀಕ್ಷಾ ನಿಯಂತ್ರಕರಾದ ಡಾ. ಆರತಿ ಶಾನಭಾಗ ಅವರು ಮುಖ್ಯ ಅತಿಥಿ ಮತ್ತು ಮೊದಲ ಅಧಿವೇಶನದ ಸಂಪನ್ಮೂಲ ವ್ಯಕ್ತಿಯಾಗಿದ್ದರು. "ಐಪಿಆರ್ ಮೂಲಭೂತಗಳು: ನಿಮ್ಮ ಹಕ್ಕುಗಳನ್ನು ತಿಳಿಯಿರಿ, ನಿಮ್ಮ ಕೃತಿಯನ್ನು ರಕ್ಷಿಸಿಕೊಳ್ಳಿ" ಎಂಬ ವಿಷಯದ ಕುರಿತು ಮಾತನಾಡಿದ ಅವರು ಬೌದ್ಧಿಕ ಸ್ವತ್ತು ಹಕ್ಕುಗಳ ಅವಶ್ಯಕತೆ ಮತ್ತು ಮಹತ್ವವನ್ನು ವಿವರಿಸಿದರು. ನಂತರದ ಸೆಷನ್‌ಗಳನ್ನು ಮಂಗಳೂರು ಎಸ್ ಡಿ ಎಂ ಕಾನೂನು ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಬಾಲಿಕಾ ಮತ್ತು ಡಾ. ಸಂತೋಷ್ ಪ್ರಭು ಅವರು ನಡೆಸಿ, ವಾಣಿಜ್ಯ ಚಿಹ್ನೆಗಳು, ಭೌಗೋಳಿಕ ಸೂಚಕರು ಮತ್ತು ಐಪಿಆರ್ ಪದ್ದತಿಗಳು ಮತ್ತು ನಿರ್ವಹಣೆ ಕುರಿತು ವಿವರವಾಗಿ ಚರ್ಚಿಸಿದರು.
ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ. ವಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವಿದ್ಯಾರ್ಥಿಗಳು ಕಾರ್ಯಾಗಾರದ ಮಾಹಿತಿಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು. ಐಪಿಆರ್ ಸೆಲ್‌ನ ಸಂಚಾಲಕರಾದ ಶ್ರೀಮತಿ ಸುಷ್ಮಾ ಆರ್. ಶೆಟ್ಟಿ ಅವರು ಪ್ರಸ್ತಾವಿಸಿದರು. ಮತ್ತು ಶ್ರೀಮತಿ ಪೂರ್ಣಿಮಾ ಎಲ್ಲಾ ಸನ್ಮಾನಿತರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕು. ನಿಧಿಶಾ ಅತಿಥಿಗಳನ್ನು ಪರಿಚಯಿಸಿದರು, ಕು. ನಿಷಿತಾ ಕಾರ್ಯಕ್ರಮ ನಿರೂಪಿಸಿದರು. ಕು. ರಕ್ಷಾ ಸಮಾರೋಪದಲ್ಲಿ ಧನ್ಯವಾದವನ್ನು ಅರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ