ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ
ಮಂಗಳೂರು: ಅವಿಭಜಿತ ದ.ಕ. ಜಿಲ್ಲಾ ಗೃಹರಕ್ಷಕದಳದ ಕಾರ್ಕಳ ಘಟಕದಲ್ಲಿ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿದ್ದ ಮತ್ತು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ಕಾರ್ಕಳ ಮಠದ ಬೆಟ್ಟು ನಿವಾಸಿ ಸದಾಶಿವ ಕೆ. ಇವರು ನ.3 ರಂದು ದೈವಾಧೀನರಾಗಿರುತ್ತಾರೆ. ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ಇಂದು (ನ.15) ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್‍ನಲ್ಲಿ ಅವರಿಗೆ ಶ್ರದ್ದಾಂಜಲಿ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಸದಾಶಿವ ಕೆ. ಅವರ ಗೃಹರಕ್ಷಕ ದಳದಲ್ಲಿನ ಸೇವೆ ಸ್ಮರಣೀಯ. ಸದಾಶಿವ ಅವರು ಓರ್ವ ಮಾದರಿ ಹಾಗೂ ನಿಷ್ಠಾವಂತ ಗೃಹರಕ್ಷಕರಾಗಿದ್ದರು ಮತ್ತು ಇಲಾಖೆಯಲ್ಲಿ 30 ವರ್ಷಗಳಿಗಿಂತಲೂ ಹೆಚ್ಚು ಕಾಲ ನಿಷ್ಕಾಮ ಸೇವೆ ಸಲ್ಲಿಸಿದ್ದರು. ಇವರ ಸೇವೆ ಇತರರಿಗೆ ಮಾದರಿಯಾಗಿದೆ. ಅವರ ಸಾವಿನಿಂದ ಇಲಾಖೆಗೆ ತುಂಬಲಾರದ ನಷ್ಟ ಉಂಟಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು, ಅವರ ಕುಟುಂಬಕ್ಕೆ ಈ ನೋವನ್ನು ಮರೆಯುವ ಶಕ್ತಿಯನ್ನು ಆ ದೇವರು ಕರುಣಿಸಲೆಂದು ನಾವೆಲ್ಲರೂ ಪ್ರಾರ್ಥಿಸೋಣವೆಂದು ನುಡಿದರು.
ದಿವಂಗತರು ತೆಳ್ಳಾರು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದು, ಕಾರ್ಕಳ ಬಿಲ್ಲವ ಸಂಘ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿದ್ದರು ಹಾಗೂ ಭಾರತ ಸೇವಾ ದಳದ ಕಾರ್ಯದರ್ಶಿ, ಕಾರ್ಕಳ ತಾಲೂಕು ಮತ್ತು ಅವಿಭಜಿತ ದ.ಕ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ, ದೇವಿ ಕಲಾ ಆಟ್ರ್ಸ್ ಸಂಸ್ಥೆಯ ಸ್ಥಾಪಕರಾಗಿ ಹೀಗೆ ಹತ್ತಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಸಾಮಾಜಿಕ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿದ್ದರು. ಪತ್ನಿಯ ಸ್ಮರಣಾರ್ಥ ಬಿಲ್ಲವ ಸಂಘಕ್ಕೆ ಬಯಲು ರಂಗಮಂಟಪ ನಿರ್ಮಿಸಿಕೊಟ್ಟಿದ್ದರು. ಮಂಗಳೂರಿನ ಖ್ಯಾತ ದಂತವೈದ್ಯ ಡಾ ಅಶ್ವಥ್ ಸೇರಿದಂತೆ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಅಗಲಿರುತ್ತಾರೆ.
ಶ್ರದ್ದಾಂಜಲಿ ಸಭೆ ಸಂದರ್ಭದಲ್ಲಿ ಕಛೇರಿ ಸಿಬ್ಬಂದಿ ಶ್ರೀಮತಿ ಮಂಜುಳಾ ಹಾಗೂ ಗೃಹರಕ್ಷಕರಾದ ಸುನಿಲ್ ಕುಮಾರ್, ಚಂದ್ರಶೇಖರ್, ಸಂಜಯ್ ಶೆಣೈ, ದಿಲೀಪ್ ಸಾಮುವೆಲ್, ಸುಲೋಚನಾ, ಖತೀಜಮ್ಮ, ಸೇಸಮ್ಮ, ದೀಕ್ಷಾ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ