ಕೆನರಾ ಕಾಲೇಜಿನಲ್ಲಿ 'ಕಾಮ್‌ಕ್ಲಾಶ್‌' ವಿಚಾರ ಸಂಕಿರಣ

Upayuktha
0

 


ಮಂಗಳೂರು: ಕೆನರಾ ಕಾಲೇಜಿನ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಇಂಟರ್‌ಕ್ಲಾಸ್ ವಾಣಿಜ್ಯ ಮತ್ತು ನಿರ್ವಹಣಾ ಸಮ್ಮೇಳನವನ್ನು "ಕಾಮ್‌ಕ್ಲಾಶ್" ಶೀರ್ಷಿಕೆಯಲ್ಲಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತು. ಈ ಸಮಾರಂಭದ ಮುಖ್ಯ ಅತಿಥಿಗಳಲ್ಲಿ ಮಾನ್ಯ ಅರ್ಜುನ್ ಪ್ರಕಾಶ್, ಸಹಾಯಕ ಪ್ರಾಧ್ಯಾಪಕರು, ಸಂತ ಅಲೋಶಿಯಸ್ ಡೀಮ್ ಟು ಬಿ ಯೂನಿವರ್ಸಿಟಿ, ಮಂಗಳೂರು. ತಮ್ಮ ಭಾಷಣದಲ್ಲಿ, ಸತತ ಅಧ್ಯಯನದ ಮಹತ್ವವನ್ನು ಹಾಗೂ ಸ್ಫೂರ್ತಿ ಇರುವ ಸಮೂಹದಲ್ಲಿ ನಮ್ಮನ್ನು ನಾವು ತೋರಿಸುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.


ಮತ್ತೋರ್ವ ಅತಿಥಿಯಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೇಜಮ್ಮ ಎ. ಮಾತನಾಡಿದರು. ವಿದ್ಯಾರ್ಥಿಗಳಿಗೆ ಹೊಸ ವಿಷಯಗಳನ್ನು ಕಲಿಯಲು ಮತ್ತು ವಿದ್ಯಾರ್ಥಿ ಜೀವನದಲ್ಲಿ ದೃಢ ಪ್ರತಿಜ್ಞರಾಗಿರಲು ಅವರು ಪ್ರೋತ್ಸಾಹಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಎಂ.ಕಾಮ್ ವಿದ್ಯಾರ್ಥಿಗಳನ್ನು ಮುಂದುವರೆಯಲು ಮತ್ತು  ಬೆಳವಣಿಗೆಯ ಮೇಲೆ ಗಮನಹರಿಸಲು ಪ್ರೇರೇಪಿಸಿದರು.


ಈ ಕಾರ್ಯಕ್ರಮವನ್ನು ಎಂ.ಕಾಂ ಸಂಯೋಜಕಿ ಶ್ರೀಮತಿ ಸ್ವಾತಿ ನಾಯಕ್  ನಡೆಸಿಕೊಟ್ಟರು. ವಿದ್ಯಾರ್ಥಿ ಸಂಯೋಜಕರಾದ ಎಂ.ಕಾಮ್ ಅಂತಿಮದ ಕು.ಋತಿಕಾ ಮತ್ತು ಕು.ಎಂ. ಶ್ರಷ್ಠಿ ನಾಯಕ್ ಅವರು ಸಹಕರಿಸಿದರು. ಕು.ಧನ್ಯ ಅವರ ಸ್ವಾಗತಿಸಿ, ನಿವೇದಿತ ಪೈ ವಂದಿಸಿದರು. ಕು.ಅಂಜನಾ ಬಾಳಿಗಾ ಸಮಾರಂಭವನ್ನು ನಿರ್ವಹಿಸಿದರು.


'ಕಾಮ್‌ಕ್ಲಾಶ್' ಭವಿಷ್ಯದ ಕಾರ್ಯಕ್ರಮಗಳಿಗೆ ಉತ್ತಮ ತಳಹದಿಯಾಗಿದ್ದು ವಾಣಿಜ್ಯ ವಿದ್ಯಾರ್ಥಿಗಳಲ್ಲಿ ಅಧ್ಯಯನ ಮತ್ತು ಸಹಭಾಗಿತ್ವದ ಆತ್ಮವಿಶ್ವಾಸವನ್ನು ಮೂಡಿಸುತ್ತದೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top