ಕೆನರಾ ಕಾಲೇಜಿನಲ್ಲಿ 'ಕ್ಯಾನ್-ಉತ್ಸವ್'; 'ಮಂಗಳ' ವಾರ್ಷಿಕ ಸಂಚಿಕೆ ಅನಾವರಣ

Upayuktha
0


ಮಂಗಳೂರು: ಕೆನರಾ ಕಾಲೇಜಿನ ವಿದ್ಯಾರ್ಥಿ ಪರಿಷತ್, ವಿದ್ಯಾರ್ಥಿ ಕ್ಷೇಮ ಪಾಲನ ಸಂಘದ ವತಿಯಿಂದ 'ಕ್ಯಾನ್ ಉತ್ಸವ್' ದೀಪಗಳ ಹಬ್ಬವನ್ನು ಆಚರಿಸಲಾಯಿತು. ಕಾಲೇಜಿನ ಸಂಚಾಲಕರಾದ ಸಿಎ ಎಂ ಜಗನ್ನಾಥ ಕಾಮತ್ ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು ಮಾತನಾಡಿದರು.


ಕ್ರೋಧಿ ನಾಮ ಸಂವತ್ಸರವು ಪ್ರತಿಯೊಬ್ಬರ ಕನಸುಗಳನ್ನು ನನಸಾಗಿಸಲು ಶಕ್ತಿ ನೀಡಲಿ. ಮನೆ ಮನಸ್ಸುಗಳನ್ನು ಬೆಸೆಯುವ ಹಬ್ಬ ಜೀವನದ ಕಹಿಯನ್ನು ಮರೆತು ಹೀಗೆ ಸಾಮೂಹಿಕವಾಗಿ ಹಬ್ಬಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ ಲಭಿಸುವುದು ಎಂದರು.


ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ಶುಭ ಹಾರೈಸಿದರು. ವಿದ್ಯಾರ್ಥಿ ಪರಿಷತ್ ಇದರ ಉಪ ಕಾರ್ಯದರ್ಶಿ ರಕ್ಷಾ ಸ್ವಾಗತಿಸಿ, ಪರಿಷತ್ ನ ಉಪಾಧ್ಯಕ್ಷೆ ಸಿಂಚನಾ ಶೆಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ 'ಮಂಗಳ'ವನ್ನು ಅನಾವರಣಗೊಳಿಸಲಾಯಿತು.


ಕಾಲೇಜಿನ ವ್ಯವಸ್ಥಾಪಕ ಕೆ ಶಿವಾನಂದ ಶೆಣೈ, ಆಡಳಿತ ಅಧಿಕಾರಿ ಡಾ.ದೀಪ್ತಿ ನಾಯಕ್, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿಲಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ ಶೇಟ್, ವಿದ್ಯಾರ್ಥಿ ಕ್ಷೇತ್ರ ಪಾಲನ ಸಂಘದ ಅಧಿಕಾರಿಗಳಾದ ಶ್ರೀಮತಿ ಬಬಿತಾ ಎಸ್, ಶ್ರೀಮತಿ ಸ್ಮಿತಾ ಎಂ, ಶ್ರೀ ಅವಿನಾಶ್, ವಾರ್ಷಿಕ ಸಂಚಿಕೆಯ ಸಂಪಾದಕಿ ಶೈಲಜಾ ಪುದುಕೋಳಿ, ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಅಧ್ಯಕ್ಷ ಆರ್ಯಮನ್ ಪ್ರಭು, ಕಾರ್ಯದರ್ಶಿ ಎಂ ತ್ರಿವಿಕ್ರಮ ಶೆಣೈ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಋಷಭ್ ಕಾಮತ್ ನಿರೂಪಿಸಿದರು. ದೀಪಾವಳಿ ಪ್ರಯುಕ್ತ ನಡೆಸಿದ ಗೂಡುದೀಪ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top