ರಕ್ತದಾನವೇ ಶ್ರೇಷ್ಠ ದಾನ: ಡಾ ಚೂಂತಾರು

Chandrashekhara Kulamarva
0

ನಂತೂರಿನ ಶ್ರೀ ಭಾರತಿ ಕಾಲೇಜಿನಲ್ಲಿ ರಕ್ತದಾನ ಶಿಬಿರ




ಮಂಗಳೂರು: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು, ಶ್ರೀ ಭಾರತಿ ಕಾಲೇಜು ಮತ್ತು ಮಂಗಳೂರು ಹವ್ಯಕ ಸಭಾ ಆಶ್ರಯದಲ್ಲಿ, ತೇಜಸ್ವಿನಿ ಆಸ್ಪತ್ರೆಯ ರಕ್ತನಿಧಿ ಇವರ ಸಹಕಾರದೊಂದಿಗೆ ಇಂದು (ನ.24) ಬೆಳಗ್ಗೆ 9:30ರಿಂದ 12:30ರ ವರೆಗೆ ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು.


ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಬಾಲಕೃಷ್ಣ ಭಟ್ ಕೊಂಚಾಡಿ ಅವರು ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ಕಾರ್ಯದರ್ಶಿ ಡಾ ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ನಿರಂತರ ರಕ್ತದಾನ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ವ್ರದ್ದಿಸುತ್ತದೆ ಮತ್ತು ರಕ್ತದ ಕೊರತೆ ನೀಗುತ್ತದೆ. ರಕ್ತದಾನದಿಂದ ವೈದ್ಯರ ಕೆಲಸ ಸುಗಮವಾಗುತ್ತದೆ. ಈ ಕಾರಣದಿಂದ ಎಲ್ಲರೂ ಅವಕಾಶ ದೊರೆತಾಗ ನಿರಂತರ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.


ತೇಜಸ್ವಿನಿ ಆಸ್ಪತ್ರೆಯ ವೈದ್ಯರು ಮತ್ತು ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು.ತೇಜಸ್ವಿನಿ ಆಸ್ಪತ್ರೆಯ ವೈದ್ಯೆ ಡಾ ಅಲಿಷಾ ಪುಟ್ರಾಡೋ,  ಭಾರತೀ ಕಾಲೇಜಿನ ಶ್ರೀಕೃಷ್ಣ ನೀರಮೂಲೆ, ಮಂಗಳೂರು ಹವ್ಯಕ ಸಭಾದ ಅಧ್ಯಕ್ಷೆ ಶ್ರೀಮತಿ ಗೀತಾ ಗಣೇಶ್ ಸುಂದರ್, ಉಪಯುಕ್ತ ಡಿಜಿಟಲ್ ನ್ಯೂಸ್ ನ ಚಂದ್ರಶೇಖರ ಕುಳಮರ್ವ  ಶಿಬಿರದಲ್ಲಿ ಉಫಸ್ಥಿತರಿದ್ದರು. ಸುಮಾರು 20 ಮಂದಿ ರಕ್ತದಾನಗೈದರು.

Post a Comment

0 Comments
Post a Comment (0)
To Top