ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯೂಎಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ನೆಹರೂ ಯುವ ಕೇಂದ್ರ ಉಡುಪಿ ಹಾಗೂ ಚೈತನ್ಯ ಯುವಕ ಮಂಡಲ (ರಿ) ನೀಲಾವರ ಇವರ ಸಹಯೋಗದಲ್ಲಿ ಬಿರ್ಸಾ ಮುಂಡಾ ಗೌರವ ದಿನಸ ಆಚರಿಸಲಾಯಿತು.
ಬಿರ್ಸಾ ಮುಂಡಾ ಜೀವನ ಮತ್ತು ಸಾಧನೆ ಕುರಿತ ಮಾತನಾಡಿದ ಸಂಪನ್ಮೂಲ ವ್ಯಕ್ತಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ ನೀಲಾವರ ಬಹಲ ವೈವಿಧ್ಯಮಯ ಮತ್ತು ವಿಶ್ವದ ಬಲುದೊಡ್ಡ ಸ್ವಾತಂತ್ರ್ಯ ಸಂಗ್ರಾಮವಾದ ಭಾರತ ರಾಷ್ಟ್ರೀಯ ಹೋರಾಟದಲ್ಲಿ ಕಡೆಗಣಿಸಲ್ಪಟ್ಟ ಸಮುದಾಯಗಳ ಕೊಡುಗೆಗಳನ್ನು ಗುರುತಿಸುವ ಮತ್ತು ಪರಿಚಯಿಸುವ ಅವಶ್ಯಕತೆಯಿದೆ.
ದೇಸಿ ಸಂಸ್ಕೃತಿ, ನೆಲ, ಜಲ ಮತ್ತು ಮಣ್ಣಿಗಾಗಿ ಬಿರ್ಸಾ ಮುಂಡಾ ಕೊಡುಗೆ ಅಪಾರ. ತನ್ನದೇ ಮಾದರಿ ಮತ್ತುಧರ್ಮದ ಮೂಲಕ ಬ್ರಿಟೀಷ್‌ರಾಜ್‌ಗೆ ಪ್ರತಿಯಾಗಿ ಮುಂಡಾರಾಜ್ ಸ್ಥಾಪಿಸಿದ ಬಿರ್ಸಾ ಮುಂಡಾ ಕುರಿತು ಯುವಜನತೆ ಅನುಕರಿಸಬೇಕಾದ್ದು ಬಹಳಷ್ಟಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು.
ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ರಘು ನಾಯ್ಕ ಕಾರ್ಯಕ್ರಮದ ಔಚಿತ್ಯ ತಿಳಿಸಿ ಅತಿಥಿಗಳನ್ನು ಸ್ವಾಗತಿಸಿದರೆ ಎನ್.ಎಸ್.ಎಸ್. ವಿದ್ಯಾರ್ಥಿನಿ ಸೋನಿಯಾ ವಂದನಾರ್ಪಣೆಗೈದರು. ಬೆನಾಸಿರ್ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಘಟಕ-2ರ ಯೋಜನಾಧಿಕಾರಿ ಶ್ರೀಮತಿ ಮಮತಾ, ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ, ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ ಭಟ್, ವಾಣಿಜ್ಯಶಾಸ್ತ್ರ ಮುಖ್ಯಸ್ಥೆ ಶ್ರೀಮತಿ ಬಿಂದು ಟಿ., ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಆರತಿ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಂಡಾ ಸಮುದಾಯ ಸೇರಿದ ವಿದ್ಯಾರ್ಥಿಗಳ ಜೊತೆಗೆ ಎನ್.ಎಸ್.ಎ. ಹಾಗೂ ಚೈತನ್ಯಯುವಕ ಮಂಡಲ (ರಿ) ನೀಲಾವರ ಇದರ ಸದಸ್ಯರು ಭಾಗವಹಿಸಿದರು. ಬಿರ್ಸಾ ಮುಂಡಾ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ