ಎಡನೀರು ಶ್ರೀಗಳ ಮೇಲೆ ಗೂಂಡಾಗಿರಿ ತೋರಿದವರನ್ನು ಕೂಡಲೇ ಬಂಧಿಸಿ: ವಿ.ಬಿ. ಕುಳಮರ್ವ

Upayuktha
0


ಕುಂಬಳೆ: "ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸುತ್ತಿದೆ ಜಗದ್ಗುರು ಶ್ರೀ ಶಂಕರಾಚಾರ್ಯ ಪರಂಪರೆಯ ಶ್ರೀ ಎಡನೀರು ಮಠ. ಇಲ್ಲಿನ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಶ್ರೀ ಪಾದಂಗಳವರು ಸರ್ವಧರ್ಮ ಸಹಿಷ್ಣುಗಳು. ಶ್ರೀ ಮಠದಲ್ಲಿ ಜಾತಿಮತ ನೋಡದೆ ಎಲ್ಲ ಜನಾಂಗದವರಿಗೂ ಮುಕ್ತ ಸ್ವಾಗತವಿದೆ. ಕಲೆ, ಸಾಹಿತ್ಯ, ಶಿಕ್ಷಣ ಮೊದಲಾದ ಹತ್ತುಹಲವು ಯೋಜನೆಗಳು ಇಲ್ಲಿ ಅನುಷ್ಠಾನಗೊಳ್ಳುತ್ತಲೇ ಇವೆ. ಅಂತಹ ದೈವಾಂಶಸಂಭೂತರಾದ ಸ್ವಾಮೀಜಿಯವರನ್ನು ವಿನಾಕಾರಣ ರಸ್ತೆಯಲ್ಲಿ ಅಡ್ಡಗಟ್ಟಿ ಮಾರಕಾಯುಧಗಳಿಂದ ಅವರ ವಾಹನವನ್ನು ಪುಡಿಗಟ್ಟಿ ಬೆದರಿಕೆ ಹಾಕಿದ ದುಷ್ಟರನ್ನು ಕೂಡಲೇ ಬಂಧಿಸಿ ನ್ಯಾಯವನ್ನು ದೊರಕಿಸಿಕೊಡಬೇಕು" ಎಂದು ಸಿರಿಗನ್ನಡ ವೇದಿಕೆಯ ಕೇರಳ ರಾಜ್ಯ ಘಟಕದ ಅಧ್ಯಕ್ಷರಾದ ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಅವರು ಆಗ್ರಹಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top