ಆಳ್ವಾಸ್ ಗೆ 71 ಪದಕದೊಂದಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ

Chandrashekhara Kulamarva
0

ಮೂರು ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿ



ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಮಂಗಳೂರು ಮತ್ತು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ


 ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 47 ಚಿನ್ನ, 17 ಬೆಳ್ಳಿ ಮತ್ತು 07 ಕಂಚಿನ ಪದಕಗಳೊಂದಿಗೆ 71 ಪದಕದೊಂದಿಗೆ 4 ಕ್ರೀಡಾಕೂಟದ ನೂತನ ಕೂಟ ದಾಖಲೆಯನ್ನು ನಿರ್ಮಿಸುವ ಮೂಲಕ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಪ್ರಶಸ್ತಿ, ಪ್ರೌಢಶಾಲಾ 14ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿ ಹಾಗೂ ಪ್ರೌಢಶಾಲಾ 17ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿಯೊಂದಿಗೆ ಕ್ರೀಡಾಕೂಟದ ಸಮಗ್ರ ಚಾಂಪಿಯನ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.


ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ:

ಬಾಲಕರ ವಿಭಾಗ: ಸುಭಾಷ್ ಎ ಆರ್ – 13 ಅಂಕ

ಬಾಲಕಿಯರ ವಿಭಾಗ: ರಕ್ಷಿತಾ ಮತ್ತಪ್ಪ – 10 ಅಂಕ

ಪ್ರೌಢ ಶಾಲಾ 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ:

ಬಾಲಕರ ವಿಭಾಗ: ಕೌಶಿಕ್ ಪಿ ಶೆಟ್ಟಿಗಾರ್ – 10 ಅಂಕ, ಆದಿತ್ಯ – 10 ಅಂಕ

ಪ್ರೌಢ ಶಾಲಾ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ:

ಬಾಲಕರ ವಿಭಾಗ: ಸಮರ್ಥ್ ಸಂಜೀವ ಕುಮಾರ್ – 15 ಅಂಕ

ಬಾಲಕಿಯರ ವಿಭಾಗ: ನಾಗಿಣಿ – 10 ಅಂಕ, ಗೋಪಿಕಾ ಜಿ - 10 ಅಂಕ


ಫಲಿತಾಂಶ:

ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಫಲಿತಾಂಶ:  ಪ್ರೇಕ್ಷಾ – 80ಮೀ ಹರ್ಡಲ್ಸ್ (ಪ್ರಥಮ), ಎತ್ತರ ಜಿಗಿತ (ದ್ವಿತೀಯ), 4x100ಮೀ ರಿಲೇ (ಪ್ರಥಮ), ರಕ್ಷಿತಾ – ಉದ್ದ ಜಿಗಿತ (ಪ್ರಥಮ), ಎತ್ತರ ಜಿಗಿತ (ಪ್ರಥಮ), 4x100ಮೀ ರಿಲೇ (ಪ್ರಥಮ), ದೀಪಾ - 4x100ಮೀ ರಿಲೇ (ಪ್ರಥಮ), ಕೃತಿಕಾ – 4x100ಮೀ ರಿಲೇ (ಪ್ರಥಮ), ಸುಭಾಷ್ – 400ಮೀ (ಪ್ರಥಮ), 80ಮೀ ಹರ್ಡಲ್ಸ್ (ಪ್ರಥಮ), ಉದ್ದ ಜಿಗಿತ (ದ್ವಿತೀಯ),


ಪ್ರೌಢ ಶಾಲಾ 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಫಲಿತಾಂಶ : ವೀಕ್ಷಾ – 100ಮೀ (ದ್ವಿತೀಯ), ಸುಜಾತ – 200ಮೀ (ಪ್ರಥಮ), ಮೇಘಾ – 400ಮೀ (ಪ್ರಥಮ), ಅನುಶ್ರೀ – 600ಮೀ (ಪ್ರಥಮ), ಅಮೂಲ್ಯ - 80ಮೀ ಹರ್ಡಲ್ಸ್ (ಪ್ರಥಮ), ಸವಿತಾ – ಗುಂಡು ಎಸೆತ (ಪ್ರಥಮ), ಆದರ್ಶ್ – 100ಮೀ (ಪ್ರಥಮ), 200ಮೀ (ದ್ವಿತೀಯ), ಆದಿತ್ಯ – 400ಮೀ (ಪ್ರಥಮ), 600ಮೀ (ಪ್ರಥಮ), ಕೌಶಿಕ್ - 80ಮೀ ಹರ್ಡಲ್ಸ್ (ಪ್ರಥಮ), ಉದ್ದ ಜಿಗಿತ (ಪ್ರಥಮ), ಲೋಹಿತ್ ಗೌಡ – ಗುಂಡು ಎಸೆತ (ಪ್ರಥಮ)


ಪ್ರೌಢ ಶಾಲಾ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಫಲಿತಾಂಶ : ಗೋಪಿಕಾ ಜಿ -100ಮೀ (ಪ್ರಥಮ), 200ಮೀ (ಪ್ರಥಮ), 4x100ಮೀ ರಿಲೇ (ಪ್ರಥಮ), ನಯೋನಿಕಾ - 4x100ಮೀ ರಿಲೇ (ಪ್ರಥಮ), ಚಿನ್ಮಯಿ - 4x100ಮೀ ರಿಲೇ (ಪ್ರಥಮ), ಸಹನಾ- 4x100ಮೀ ರಿಲೇ (ಪ್ರಥಮ), ಪ್ರಾರ್ಥನಾ – 400ಮೀ (ದ್ವಿತೀಯ), 4x400ಮೀ ರಿಲೇ (ಪ್ರಥಮ), ನಾಗಿಣಿ – 800ಮೀ (ಪ್ರಥಮ), 1500ಮೀ (ಪ್ರಥಮ), ಪ್ರಿಯಾಂಕ – 800ಮೀ (ದ್ವಿತೀಯ), 3000ಮೀ (ಪ್ರಥಮ), 4x400ಮೀ ರಿಲೇ (ಪ್ರಥಮ), ಜಿ ಕಿರಣ – 1500ಮೀ (ದ್ವಿತೀಯ), ಅಂಜಲಿ - 3000ಮೀ (ತೃತೀಯ), ಪ್ರೀತಿ – 400ಮೀ ಹರ್ಡಲ್ಸ್ (ಪ್ರಥಮ), 4x400ಮೀ ರಿಲೇ (ಪ್ರಥಮ), ವರ್ಷ - 400ಮೀ ಹರ್ಡಲ್ಸ್ (ದ್ವಿತೀಯ), 4x400ಮೀ ರಿಲೇ (ಪ್ರಥಮ), ಪೂಜಾ – ಉದ್ದ ಜಿಗಿತ (ತೃತೀಯ), ತ್ರಿವಿಧ ಜಿಗಿತ (ತೃತೀಯ), ಯಾಶಿನಿ - ಚಕ್ರ ಎಸೆತ (ಪ್ರಥಮ), ಚಸ್ಮಿತಾ - ಚಕ್ರ ಎಸೆತ (ದ್ವಿತೀಯ), ಪ್ರೇಕ್ಷಿತಾ – ಜಾವೆಲಿನ್ ಎಸೆತ (ದ್ವಿತೀಯ), ಜಾಸ್ಮಿನ - ಹ್ಯಾಮರ್ ಎಸೆತ (ಪ್ರಥಮ), ಸ್ಪೂರ್ತಿ - ಹ್ಯಾಮರ್ ಎಸೆತ (ದ್ವಿತೀಯ), 


ಸಾಹಿಲ್ – 100ಮೀ (ದ್ವಿತೀಯ), 200ಮೀ (ದ್ವಿತೀಯ), 4x100ಮೀ ರಿಲೇ (ಪ್ರಥಮ), 4x400ಮೀ ರಿಲೇ (ತೃತೀಯ), ರಿನಿಶ್ – 100ಮೀ (ತೃತೀಯ), 4x100ಮೀ ರಿಲೇ (ಪ್ರಥಮ), ಸಮರ್ಥ್ – 800ಮೀ (ಪ್ರಥಮ), 1500ಮೀ (ಪ್ರಥಮ), 3000ಮೀ (ಪ್ರಥಮ), 4x400ಮೀ ರಿಲೇ (ತೃತೀಯ), ಆಕಾಶ್ – 110ಮೀ ಹರ್ಡಲ್ಸ್ (ಪ್ರಥಮ), 400ಮೀ ಹರ್ಡಲ್ಸ್ (ಪ್ರಥಮ), 4x100ಮೀ ರಿಲೇ (ಪ್ರಥಮ), 4x400ಮೀ ರಿಲೇ (ತೃತೀಯ), ಗೌತಮ್ - 110ಮೀ ಹರ್ಡಲ್ಸ್ (ದ್ವಿತೀಯ), ಪ್ರಥ್ವಿಕ್ – ತ್ರಿವಿಧ ಜಿಗಿತ (ದ್ವಿತೀಯ), ಧನುಷ್ – ಗುಂಡು ಎಸೆತ (ಪ್ರಥಮ), ಚಕ್ರ ಎಸೆತ (ಪ್ರಥಮ), ಮೈಲಾರಿ – ಚಕ್ರ ಎಸೆತ (ದ್ವಿತೀಯ), ವಿಜಯ್ ಕುಮಾರ್ – ಜಾವಲೆನ್ ಎಸೆತ (ದ್ವಿತೀಯ), ಪ್ರಕಾಶ್ - ಹ್ಯಾಮರ್ ಎಸೆತ (ತೃತೀಯ), ಪ್ರಶಾಂತ್ – 4x400ಮೀ ರಿಲೇ (ತೃತೀಯ), ರಾಜ್ - 4x100ಮೀ ರಿಲೇ (ಪ್ರಥಮ).


ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top