ಪ್ರಸನ್ನಾ ವಿ. ಚೆಕ್ಕೆಮನೆಯವರ ಎರಡು ಕೃತಿಗಳ ಅನಾವರಣ

Chandrashekhara Kulamarva
0




ಕಾಸರಗೋಡು: ಕಾಸರಗೋಡಿನ ಲೇಖಕಿ ಪ್ರಸನ್ನಾ ವಿ. ಚೆಕ್ಕೆಮನೆಯವರ ಎರಡು ಕೃತಿಗಳ ಬಿಡುಗಡೆ ಸಮಾರಂಭವು ಕಮಾಂಡೋ ಶ್ಯಾಮರಾಜ್ ಅವರ ಎದುರ್ತೋಡು ಸೀ ಕ್ಯೂಬ್ ನಿವಾಸದಲ್ಲಿ ಸೋಮವಾರ (ನ.4) ಅಪರಾಹ್ನ‌ ಜರಗಿತು.


ಲೇಖಕಿ ಪ್ರಸನ್ನಾ ಅವರ ಹನ್ನೊಂದನೆಯ ಕೃತಿ 'ಬಾನಂಚಿನ ಹೊಸಗಾನ'ವನ್ನು ಭಾರತೀಯ ಭೂಸೇನೆಯ ಕಮಾಂಡೋ ಶ್ಯಾಮರಾಜ್ ಬಿಡುಗಡೆಗೊಳಿಸಿದರು. 


ಹನ್ನೆರಡನೆಯ ಕೃತಿ 'ಪೋಗದೆ ಇರೆಲೋ ರಂಗಾ..' ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಅನಾವರಣಗೊಳಿಸಿದರು. "ಕಾಸರಗೋಡು ಸದಾ ಕನ್ನಡದ ಕಂಪನ್ನು ಪಸರಿಸುವ ಪ್ರದೇಶವಾಗಿದೆ. ಇಲ್ಲಿ ಸಾಹಿತ್ಯಸೇವೆ ಮಾಡುವ ಘಟಾನುಘಟಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಯಾವುದೇ ಕಾರ್ಯಕ್ರಮವಾದರೂ ಹೃದಯಕ್ಕೆ ಹತ್ತಿರವಾಗಿ ಮನಸ್ಸಿಗೆ ಸಂತೋಷವನ್ನು ನೀಡುವಂತಿರಬೇಕು. ಇಂತಹ ಒಂದು ಸರಳ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡುತ್ತಿರುವುದು ಅಪಾರ ಸಂತಸ ನೀಡಿದೆ. ಲೇಖಕಿ ಪ್ರಸನ್ನಾ ಬಹಳ ಆಸಕ್ತಿಯಿಂದ ಕೃತಿ ರಚನೆ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದ ಇವರ ಸಾಧನೆ ಶ್ಲಾಘನೀಯ. ಇವರ ಕೃತಿಗಳು ಎಲ್ಲರೂ ಮೆಚ್ಚುವಂತಿದೆ" ಎಂದರು.



ಅತಿಥಿಯಾಗಿ ಭಾಗವಹಿಸಿದ ಹೊಸದಿಗಂತ ಸ್ಥಾನೀಯ ಸಂಪಾದಕರಾದ ಪ್ರಕಾಶ್ ಇಳಂತಿಲ ಮಾತನಾಡಿ, "ಸೃಜನಶೀಲವಾದಂತಹ ಮನಸ್ಸಿನೊಂದಿಗೆ ಸಾಹಿತ್ಯ ರಚಿಸುವ ಕೃತಿಕಾರರ ಸಾಧನೆ ಸಾರ್ಥಕತೆಯನ್ನು ಕಂಡಿದೆ. ಇವರ ಕೃತಿಗಳು ಸಾಹಿತ್ಯಾಸಕ್ತಿ ಇಲ್ಲದವರನ್ನೂ ಆಕರ್ಷಿಸುವಂತೆ ಮಾಡುವ ಬರಹಗಳಾಗಿವೆ" ಎಂದರು.


ಅಧ್ಯಕ್ಷತೆ ವಹಿಸಿದ ಕಮಾಂಡೋ ಶ್ಯಾಮರಾಜ್, "ಪ್ರಸನ್ನಾ ಅವರ ಸಾಹಿತ್ಯ ಸಾಧನೆ ಹೆಮ್ಮೆಯೆನಿಸುತ್ತಿದೆ. ಲೇಖಕಿಯಿಂದ ಇನ್ನಷ್ಟು ಕೃತಿಗಳು ಮೂಡಿ ಕನ್ನಡ ಸಾಹಿತ್ಯ ಶ್ರೀಮಂತವಾಗಲಿ" ಎಂದು ಶುಭಹಾರೈಸಿದರು.


ಕಾರ್ಯಕ್ರಮದ ಆರಂಭದಲ್ಲಿ ಪ್ರಸನ್ನಾ ಚೆಕ್ಕೆಮನೆಯ ಮಾತೃಶ್ರೀಯವರಾದ ರಮಾ ಎಚ್. ಭಟ್ ಹಾಗೂ ಶುಭಾಶಂಕರಿ ತೊಟ್ಟೆತ್ತೋಡಿ ದೀಪ ಪ್ರಜ್ವಲನೆ ಮಾಡಿ ಮಾನಸಾ ಮುಣ್ಚಿಕಾನ ಪ್ರಾರ್ಥನೆ ಹಾಡಿದರು. ಪ್ರಸನ್ನಾ ಚೆಕ್ಕೆಮನೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದ ಕಾರ್ಯಕ್ರಮವನ್ನು ಬಹಳ ಚಂದದ ನಿರೂಪಣೆಯೊಂದಿಗೆ ಉಪನ್ಯಾಸಕರಾದ ನಾಗರಾಜ ಶರ್ಮಾ ನಿರೂಪಿಸಿ ವಂದಿಸಿದರು.


ತಂತ್ರಿವರ್ಯ ಶಂಕರನಾರಾಯಣ ಶರ್ಮಾ ಗೋಸಾಡ, ಭೂಮಿಕಾ ಪ್ರತಿಷ್ಠಾನದ ಅನುಪಮಾ ರಾಘವೇಂದ್ರ ಉಡುಪುಮೂಲೆ, ಪತ್ರಕರ್ತ ಗಂಗಾಧರ ತೆಕ್ಕೆಮೂಲೆ, ಮರುವಳ ತಿರುಮಲೇಶ್ವರ ಭಟ್, ಮೀನಗದ್ದೆ ಶ್ರೀಕೃಷ್ಣ ಭಟ್, ವೆಂಕಟಕೃಷ್ಣ ಚೆಕ್ಕೆಮನೆ, ರಾಜಶ್ರೀ ಶರ್ಮಾ ಸಹಿತ ಅನೇಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top