ಕೆಲವು ಗ್ರೂಪ್‌ಗಳಲ್ಲಿ ವಕ್ಫ್ ಆಸ್ತಿ ಅಂತ ಪ್ರಿಂಟಾದ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲೂಕಿನ, ಸುರತ್ಕಲ್ ಹೋಬಳಿಯ, ಚೇಳಿಯಾರು ಗ್ರಾಮದ ಒಂದು ರೈತ ಕುಟುಂಬದ ಪಹಣಿ ಸ್ಕ್ರೀನ್ ಶಾಟ್‌ನಲ್ಲಿ ವಕ್ಫ್ ಆಸ್ತಿ ಎಂದು ಕೃತಕವಾಗಿ ಎಡಿಟ್ ಮಾಡಿ ಸೇರಿಸಿ ಗ್ರೂಪ್‌ಗಳಲ್ಲಿ ಹರಿಯಬಿಡಲಾಗದ್ದು, ಅದು ಫೇಕ್ ಸುದ್ದಿ ಆಗಿರುತ್ತದೆ.
ಇದೇ ತರಹದ ಪಹಣಿ ಬಂದರೆ, ಫಾರ್ವರ್ಡ್ ಮಾಡುವ ಮೊದಲು ಒಮ್ಮೆ ಪರಿಶೀಲಿಸಿ ಮಾಡುವುದು ಒಳ್ಳೆಯದು. ಹೇಗೂ ಪರಿಶೀಲಿಸಲು ಅವಕಾಶ ಇದೆ.
ಸದರಿ ಫೇಕ್ ಪಹಣಿಯ ಸರ್ವೆ ನಂಬರ್ ಬಳಸಿ, ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪರಿಶೀಲನೆ ಮಾಡಿದಾಗ, ವಕ್ಫ್ ಆಸ್ತಿ ಎಂದು ನಮೂದಾಗಿರುವುದಿಲ್ಲ. ಜೊತೆಗೆ, ಫೇಕ್ ಮೆಸೇಜಿನ ಫೋಟೋ ಪಹಣಿಯಲ್ಲಿ ವಕ್ಫ್ ಆಸ್ತಿ ಎನ್ನುವ ಪದದ ಫಾಂಟ್ ಸೈಜ್ ಗಮನಿಸಿದರೆ, ಇತರ ಪ್ರಿಂಟೆಡ್ ಫಾಂಟ್ ಸೈಜಿಗಿಂತ ಭಿನ್ನವಾಗಿದೆ.
ರೈತರು ಬಗೆಯ ಈ ಫೇಕ್ ಮೆಸೇಜ್‌ಗಳಿಂದಲೂ ಎಚ್ಚರದಿಂದಿರಬೇಕು.
ನಾಳೆ, ಈ ರೀತಿಯ ಫೇಕ್ RTC ಹಿಡಿದು "ನೋಡಿ ನಿಮ್ಮ ಪಹಣಿಯಲ್ಲಿ 'ವಕ್ಫ್ ಆಸ್ತಿ' ಅಂತ ಇದೆ, ಸರಿ ಮಾಡಿ ಕೊಡ್ತಿವಿ, 500 ರುಪಾಯಿ ಕೊಡಿ" ಅಂತ ಒಂದು ವ್ಯವಹಾರ ಶುರು ಮಾಡಿ, ರೈತರ ಸುಲಿಗೆ ಶುರು ಆಗಬಹುದು!!? ಸ್ವಲ್ಪ ಎಚ್ಚರದಿಂದಿರೋಣ.
ನಮ್ಮ ಜಮೀನಿನ ಪಹಣಿ ಪರಿಶೀಲನೆಗೆ ಈ ಲಿಂಕ್ ಬಳಸಿ ನೋಡಬಹುದು.
https://landrecords.karnataka.gov.in/Service2/
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ