ಇದೊಂದು ಕೇನೆ ಗಡ್ಡೆ. ಸುವರ್ಣ ಗಡ್ಡೆ ಅಂತ ಪ್ರಖ್ಯಾತ ನಾಮ. ಲೌಕಿಕ ಜಗತ್ತಿನಲ್ಲಿ ಸುವರ್ಣಕ್ಕೆ ಇರುವ ಮೌಲ್ಯ ಆಹಾರದ ಜಗತ್ತಿನಲ್ಲಿ ಈ ತರಕಾರಿಗೆ ಕೊಟ್ಟಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆ ಇರುವವರಿಗೂ ಇದು ಬಹಳ ಹಿತಕಾರಿಯಂತೆ. ಎಲುಬಿನ ಬೆಳವಣಿಗೆಗೆ ವಿಶಿಷ್ಟ ಕೊಡುಗೆ ಈ ತರಕಾರಿಯ ಸೇವನೆಯಿಂದ ಸಾಧ್ಯ ಎಂದು ಆಯುರ್ವೇದದಲ್ಲಿ ತಿಳಿಸಿರುವರು. ಮೂಳೆ ಸಂಬಂಧಿ ಚಿಕಿತ್ಸೆಗೊಳಗಾದವರಿಗೆ ಸಾಮಾನ್ಯವಾಗಿ ವೈದ್ಯರು ಶಿಫಾರಸ್ಸು ಮಾಡುವರು. ಯಾವುದೇ ರೋಗ ರುಜಿನಗಳಿಲ್ಲದೆ ಸುಲಭವಾಗಿ ಬೆಳೆಯುವ ಮತ್ತು ಬೆಳೆಸುವ ತರಕಾರಿ.
ಆದರೆ ಇದಕ್ಕೂ ರಾಸಾಯನಿಕಗಳು ಹಾಕುವ ಕಾರಣ ಕೊಳೆ ರೋಗ ಇದೆ ಎಂದು ಕೇಳಿದ ಸುದ್ದಿ. ಅದಕ್ಕೆಲ್ಲ ಯಾವ ವಿಷ ಪ್ರಾಶನ ಮಾಡುತ್ತಾರೋ ನನಗಂತೂ ಗೊತ್ತಿಲ್ಲ.
ಇದು ನಮ್ಮ ಮನೆಯಲ್ಲಿ ಆದದ್ದು. ಕೇವಲ ಸಗಣಿ ಅಡಿಕೆ ಸಿಪ್ಪೆ ಮತ್ತು ಸುಡು ಮಣ್ಣಿನ ಪ್ರಭಾವ. ಬರೋಬ್ಬರಿ ಒಂಬತ್ತು ಮುಕ್ಕಾಲು ಕೆಜಿ.
- ಎ.ಪಿ ಸದಾಶಿವ ಮರಿಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ