ಬದಿಯಡ್ಕ: ಇತ್ತೀಚೆಗೆ 257ನೇ ಸಾಮೂಹಿಕ ಪ್ರತಿ ರುದ್ರ ಪಾರಾಯಣ ಬದಿಯಡ್ಕ ಬೋಳುಕಟ್ಟೆ ಸಮೀಪ ಪಶುವೈದ್ಯ ಡಾ. ವೈ.ವಿ. ಕೃಷ್ಣಮೂರ್ತಿ ಅವರ ಶಿವಸದನ ಮನೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಅಪಾರ ಸಾಮಾಜಿಕ ಕೊಡುಗೆ ನೀಡಿದ ವೇದ ವಿದ್ವಾಂಸರಾದ ವೇ.ಮೂ. ಪಳ್ಳತ್ತಡ್ಕ ಪರಮೇಶ್ವರ ಭಟ್ಟರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
"ತಮ್ಮ ವಿದ್ವತ್ಪೂರ್ಣ ಪ್ರವಚನ, ಸಾಮೂಹಿಕ ಪೂಜೆ ಪುನಸ್ಕಾರಗಳು, ಯಕ್ಷಗಾನ ತಾಳಮದ್ದಳೆ ಹಾಗೂ ಪುತ್ರಕಾಮೇಷ್ಠಿಯಂತಹ ವಿಶೇಷ ಯಜ್ಞಯಾಗಾದಿಗಳ ನೇತೃತ್ವದಲ್ಲಿ ನಡೆಸಿದವರಾಡಗಿ ಜನಾನುರಾಗಿಯಾಗಿದ್ದರು" ಎಂದು ಅವರನ್ನು ಸ್ಮರಿಸಿಕೊಳ್ಳಲಾಯಿತು.
2014 ರಿಂದ ನಿರಂತರವಾಗಿ ಪ್ರದೋಷ ಕಾಲದಲ್ಲಿ ಪ್ರತಿ ತಿಂಗಳು ನಡೆದು ಬರುತ್ತಿದೆ. ಪ್ರತಿಯೊಬ್ಬರು ರುದ್ರಾಧ್ಯಾಯಿಗಳಾಗಬೇಕು ಎನ್ನುವ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನುಗ್ರಹದ ಗುರಿಯೊಂದಿಗೇ 257ನೇ ಪ್ರತಿ ರುದ್ರವು ಪಶುವೈದ್ಯ ಡಾ. ವೈ.ವಿ. ಕೃಷ್ಣಮೂರ್ತಿಯವರ ಮನೆಯಲ್ಲಿ ಇತ್ತೀಚೆಗೆ ಸಂಪನ್ನಗೊಂಡಿತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ