ಮರೆಯಾಗುತ್ತಿರುವ ಕನ್ನಡ ಪ್ರೇಮ...

Upayuktha
0


ಮ್ಮ ದೇಶದಲ್ಲಿ ಅದೆಷ್ಟೋ ಭಾಷೆಯನ್ನು ಕಾಣಬಹುದು. ವಿವಿಧತೆಯಲ್ಲಿ ಏಕತೆ ಎಂಬ ಮೌಲ್ಯವನ್ನು ಹೊಂದಿದೆ. ಆ ಭಾಷಾ ವೈವಿಧ್ಯತೆಯನ್ನು ವರ್ಣಿಸಲು ಪದಗಳೇ ಸಾಲದು. 


ನಮ್ಮ ರಾಜ್ಯದಲ್ಲಿ ನಮ್ಮ ಹೆಮ್ಮೆಯ ಭಾಷೆ ಎಂದರೆ ಕನ್ನಡ. ಕನ್ನಡ ಭಾಷೆ, ನಾಡು-ನುಡಿ ನಮ್ಮ ಹೆಮ್ಮೆ. ನಮ್ಮ ಕನ್ನಡ ಭಾಷೆಗೆ ಅದೆಷ್ಟೋ ಪುರಾತನ ದಾಖಲೆಯ ಇತಿಹಾಸವಿದೆ. ಶ್ರೀವಿಜಯನ ಕವಿರಾಜಮಾರ್ಗದಿಂದ ಹಿಡಿದು ಕದಂಬರ ಆಳ್ವಿಕೆಯಲ್ಲಿ ಬಂದ ಹಲ್ಮಿಡಿ  ಶಾಸನಗಳವರೆಗೂ ಕನ್ನಡದ ಪರಂಪರೆಯನ್ನು ಕಾಣಬಹುದು. ಕನ್ನಡ ಭಾಷೆಯ ಕುರಿತು ಅನೇಕ ಕವಿ ಕವಯತ್ರಿಗಳು ತನ್ನದೇ ವಿಭಿನ್ನ ಶೈಲಿಗಳಲ್ಲಿ ಬಣ್ಣಿಸಿ ಅದರ ಸೊಗಸನ್ನು ರಾಷ್ಟ್ರಕ್ಕೆ ಪರಿಚಯಿಸಿದ್ದಾರೆ. ಕನ್ನಡದ ಒಲವು ಪ್ರೇಮದಿಂದ ಅದೆಷ್ಟೋ ಕೃತಿ, ನಾಟಕ, ಕಾದಂಬರಿ ಮತ್ತು ವಚನಗಳು ಚಾಲ್ತಿಗೆ  ಬಂದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಪ್ರೇಮ, ಸೊಬಗು ಮರೆಯಾಗುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ ನಾವು ಕನ್ನಡದವರು ಎಂದು ಹೇಳಲು ಸಂಕೋಚಪಡುವ ಮಟ್ಟಿಗೆ ನಮ್ಮೊಳಗಿನ ಕನ್ನಡ ತನ ಕಣ್ಮರೆಯಾಗಿ ಹೋಗಿದೆ. ಕನ್ನಡಿಗರಾದ ನಾವೇ ಕನ್ನಡವನ್ನು ಮಾತನಾಡಲು ಹಿಂದೆ-ಮುಂದೆ  ನೋಡುತ್ತಿದ್ದೇವೆ.


ಕನ್ನಡ ಮಾತೆಯ ಮಕ್ಕಳಾದ ನಾವೇ ಆಕೆಯನ್ನು ದೂರ ತಳ್ಳುತ್ತಿದ್ದೇವೆ. ಕನ್ನಡ ಕನ್ನಡ ಎನ್ನುವ ನಾವು ನಮ್ಮ ಭಾಷೆಯನ್ನು ಎಷ್ಟು ಬಳಕೆ ಮಾಡುತ್ತೇವೆ ಮತ್ತು ಕನ್ನಡ ಭಾಷೆಯ ಉಪಯೋಗವನ್ನು ವ್ಯವಹಾರದಲ್ಲಿ ಎಷ್ಟು ಬಳಸಿಕೊಳ್ಳುತ್ತೇವೆ? ಎಂಬ ಪ್ರಶ್ನೆಯನ್ನು ನಾವೇ ನಮಗೆ ಕೇಳಿಕೊಳ್ಳಬೇಕು. ನಮಗೆ ಬೇರೆ ಭಾಷೆಯು ಬೇಕು ಆದರೆ ನಮ್ಮ ನಾಡು-ನುಡಿಯ ಜೀವ ಕನ್ನಡ ಮಾತೆ ಆಕೆಯನ್ನು ಮೂಲೆ ಗುಂಪಾಗಿಸುವುದು ಎಷ್ಟು ಸರಿ? ನಮ್ಮ ಹೆಮ್ಮೆ ಆಕೆ. ಆಕೆಯ ಎಂದಿಗೂ ಮರೆಯಬಾರದು.


ಇತ್ತೀಚಿನ ದಿನಗಳಲ್ಲಿ ಕನ್ನಡ ಎಂಬ ಭಾಷೆಯನ್ನು ಮರೆಮಾಚಿಸಿಕೊಂಡು ಬೇರೆ ಭಾಷೆಯ ಕಡೆಗೆ ನಮ್ಮ ಪಯಣ ಬೆಳೆಸಿಕೊಳ್ಳುತ್ತಿದ್ದೇವೆ. ಕನ್ನಡ ಕೇವಲ ನವೆಂಬರ್ 1 (ಕನ್ನಡ ರಾಜ್ಯೋತ್ಸವ) ಒಂದು ದಿನಕ್ಕೆ ಸೀಮಿತವಾಗಿರಬಾರದು.

 

ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಯೆ ಮರೆಯಾಗುವ ಪರಿಸ್ಥಿತಿ ಎದುರಾಗಿದೆ. ಕನ್ನಡವನ್ನು ಕಟ್ಟುವ, ಬೆಳೆಸುವ ಕೆಲಸವನ್ನು ನಾವೇ ಮಾಡಬೇಕು ಹೊರತು ಬೇರಾರು ಮಾಡಲು ಸಾಧ್ಯವಿಲ್ಲ. "ಕನ್ನಡಿಗರು ಮೊದಲು ಕನ್ನಡಿಗರಾಗೋಣ"




- ಧನ್ಯಶ್ರೀ ಕೆ ಪೆರ್ಲಂಪಾಡಿ

ಪ್ರಥಮ ಪತ್ರಿಕೋದ್ಯಮ ವಿಭಾಗ,

ವಿವೇಕಾನಂದ (ಸ್ವಾಯತ್ತ) ಕಾಲೇಜು ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top