ಪಣಜಿ (ವಾಸ್ಕೊ): ಗೋವಾದ ವಾಸ್ಕೊಲ್ಲಿ ಮನೆ ಮುಂದೆ ನಿಲ್ಲಿಸಿದ್ದ ರೆನಾಲ್ಟ ಕ್ವಿಡ್ ಕಾರನ್ನು (ಜಿಎ-07, ಕೆ-9832) ಸಪ್ಟೆಂಬರ್ 17 ರಂದು ರಾತ್ರಿ ವೇಳೆ ವ್ಯಕ್ತಿಯೋರ್ವ ಕಳ್ಳತನ ಮಾಡಿದ್ದು ಪೋಲಿಸರು ಈತನ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ. ಈ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಕೂಡಲೇ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಪೋಲಿಸರು ತಿಳಿಸಿದ್ದಾರೆ.
ಕಾರು ಕಳುವು ಮಾಡಿದ ವ್ಯಕ್ತಿ ಸಾಧಾರಣ ಕಪ್ಪು ಬಣ್ಣ, ಸುಮಾರು 5.5 ಅಡಿ ಎತ್ತರ ಇದ್ದು, ಈ ವ್ಯಕ್ತಿಯ ಬಳಿ ಐಪೋನ್ ಕೂಡ ಇದ್ದು ಈತನು ಕಾರನ್ನು ಕದ್ದು ಕರ್ನಾಟಕಕ್ಕೆ ಹೋಗಿ ತಲೆ ಮರೆಸಿಕೊಂಡಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಆರೋಪಿಯು ಇನ್ನೂ ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು ಇನ್ನಷ್ಟು ಅಪರಾಧ ಎಸಗುವ ಮುನ್ನ ಈತನ ಪತ್ತೆಗೆ ಪೋಲಿಸರು ಹುಡುಕಾಟ ನಡೆಸಿದ್ದಾರೆ. ಪೋಲಿಸರು ಈತನ ರೇಖಾಚಿತ್ರವನ್ನೂ ಬಿಡುಗಡೆಗೊಳಿಸಿದ್ದಾರೆ. ಈ ಕಾರು ಕಂಡಲ್ಲಿ ಅಥವಾ ಈ ಪೋಟೊದಲ್ಲಿರುವ ವ್ಯಕ್ತಿ ಕಂಡುಬಂದಲ್ಲಿ ಕೂಡಲೇ ದೂ:- 9370162888 ಈ ದೂರವಾಣಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ