ಮಾತಾ ಅಮೃತಾನಂದಮಯಿ ಮಠ, ಮಂಗಳೂರು: ನೂತನ ಸೇವಾ ಸಮಿತಿ 2024-26 ಪದಗ್ರಹಣ

Upayuktha
0


ಮಂಗಳೂರು: ಮಾತಾ ಅಮೃತಾನಂದಮಯಿ ಮಠ, ಮಂಗಳೂರು ಇದರ ಸೇವಾ ಸಮಿತಿಯ ಪುನಾರಚನೆ ಹಾಗೂ ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.


ಗೌರವಾಧ್ಯಕ್ಷರಾಗಿ ಮಂಗಳೂರು ವಿ.ವಿ.ಯ ವಿಶ್ರಾಂತ ಉಪಕುಲಪತಿ ಡಾ. ಪಿ.ಎಸ್. ಎಡಪಡಿತ್ತಾಯ ಇರುವರು. ಅಧ್ಯಕ್ಷರಾಗಿ ಉದ್ಯಮಿ ಸುರೇಶ್ ಅಮೀನ್, ಉಪಾಧ್ಯಕ್ಷರುಗಳಾಗಿ ಡಾ. ರಾಜೇಶ್ವರಿದೇವಿ ಹಾಗೂ ಡಾ. ಇಂದುಮತಿ ಮಲ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ವೀಣಾ ಟಿ. ಶೆಟ್ಟಿ ಕಾರ್ಯ ನಿರ್ವಹಿಸಲಿರುವರು.


ಕೋಶಾಧಿಕಾರಿಯಾಗಿ CA. ರಾಮನಾಥ ನಾಯಕ್ ಮತ್ತು ‌ಸದಸ್ಯರುಗಳಾಗಿ ಗಣೇಶ್ ಕೆ., ಅಡ್ವೊಕೇಟ್ ಪುಷ್ಪಲತಾ, ಡಾ. ದೇವಿಪ್ರಸಾದ್, ಎಸ್. ಅಶೋಕ್, ಭರತ್ ಕುಮಾರ್ ಎರ್ಮಾಳ್, ಪ್ರವೀಣ್ ಶಬರೀಶ್, ಡಾ. ಉಮ್ಮಪ್ಪ ಪೂಜಾರಿ ಪಿ., ಗಿರೀಶ್ ರೇವಣಕರ್, ಪ್ರೇಮರಾಜ್, ರವಿಕಿರಣ್, ವಾಮನ್ ಬಿ. ಮೈಂದನ್, ಡಾ. ಸುಚಿತ್ರಾ ರಾವ್, ದಿನೇಶ್ ರಾವ್, ಚಂದ್ರಹಾಸ್ ಸುವರ್ಣ ಆಯ್ಕೆಯಾಗಿದ್ದಾರೆ.


ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಅಮೃತ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌರವಾಧ್ಯಕ್ಷ ಡಾ. ವೈ. ಸನತ್ ಹೆಗ್ಡೆ ಪ್ರಸ್ತಾವನೆಗೈದರು. ಶ್ರೀಮತಿ ಶ್ರುತಿ ಹೆಗ್ಡೆ ಪ್ರಮಾಣ ವಚನ‌ ಬೋಧಿಸಿದರು. ಆರಂಭದ ಅಧ್ಯಕ್ಷ ಡಾ. ಜೀವರಾಜ್ ಸೊರಕೆ ಹಾಗೂ ನಿಕಟಪೂರ್ವ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಉಪಸ್ಥಿತರಿದ್ದರು. ಡಾ. ದೇವದಾಸ್ ಪುತ್ರನ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top