ವಾಸ್ಕೊ: ಕರವೇ ಯುವ ಘಟಕ ಪದಾಧಿಕಾರಿಗಳ ಆಯ್ಕೆ

Upayuktha
0


ಪಣಜಿ: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಕುಮಾರ್ ಶೆಟ್ಟಿ ಬಣ ಗೋವಾ ಸಂಘಟನೆ ಇದು ಗೋವಾ ಕನ್ನಡಿಗರ ಆಸ್ತಿ. ನಾವು ಗೋವಾ ರಾಜ್ಯಾದ್ಯಂತ ಸಂಘಟನೆ ಮಾಡಿ ಗೋವಾ ಕನ್ನಡಿಗರೊಂದಿಗೆ ನಾವು ಸದಾ ಕೆಲಸ ಮಾಡೋಣ. ನಾವೆಲ್ಲರೂ ಒಗ್ಗಟ್ಟಿನಿಂದ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಹೋರಾಟ ನಡೆಸುತ್ತ ಬಂದಿದ್ದೇವೆ. ಮುಂಬರುವ ದಿನಗಳಲ್ಲಿಯೂ ಕೂಡ ಕರವೇ ಸಂಘಟನೆ ಗೋವಾ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಹೋರಾಟ ಮುಂದುವರೆಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ನುಡಿದರು.


ವಾಸ್ಕೊದಲ್ಲಿ ಆಯೋಜಿಸಿದ್ದ ಕರವೇ ಯುವ ಘಟಕದ ಪದಾಧಿಕಾರಿಗಳ ಆಯ್ಕೆ ನಂತರ ಮಂಜುನಾಥ ನಾಟೀಕರ್ ಮಾತನಾಡುತ್ತಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯು ಗೋವಾದಲ್ಲಿ ಕನ್ನಡಿಗರಿಗೆ ತೊಂದರೆಯಾದಾಗ ಸದಾ ಮುಂದೆ ಬಂದು ಹೋರಾಟ ನಡೆಸಿದೆ. ಕನ್ನಡಿಗರಿಗೆ ನೆರವಾಗಲು ಗೋವಾ ರಾಜ್ಯದಲ್ಲಿ ಕರವೇ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಮಂಜುನಾಥ ನಾಟೀಕರ್ ನುಡಿದರು.


ನೂತನವಾಗಿ ಆಯ್ಕೆಯಾದ ಕರವೇ ಯುವ ಘಟಕದ ಪದಾಧಿಕಾರಿಗಳ ಹೆಸರನ್ನು ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ಅಧೀಕೃತವಾಗಿ ಘೋಷಿಸಿದರು. ಯುವ ಘಟಕದ ಅಧ್ಯಕ್ಷರಾಗಿ ಮನೀಷ ಛಲವಾದಿ, ಉಪಾಧ್ಯಕ್ಷರಾಗಿ ಆನಂದ ಎಲವರ್ , ಬಾಳಪ್ಪ ಮೊಟಗಿ, ಕಾರ್ಯದರ್ಶಿ ಪರಶುರಾಮ ಹರಿಜನ, ಪ್ರಧಾನ ಕಾರ್ಯದರ್ಶಿ ರಮೇಶ ಬಾರಕೇರ, ರಾಜು ಹರಿಜನ, ಸಂಚಾಲಕ ಆಶೀಪ ಗೌಡರ್, ಮಾಧ್ಯಮ ಸಂಚಾಲಕರಾಗಿ ಲಕ್ಷ್ಮಣ ಅಂಕಲಗಿ, ಸಹಕಾರ್ಯದರ್ಶಿ ಸಂತೋಷ ಹೊರಕೇರಿ, ಸಲಹೆಗಾರರಾಗಿ ಶರಣಪ್ಪ ಮಾದರ, ಯಲ್ಲಪ್ಪ ಛಲವಾದಿ, ಆಯ್ಕೆಯಾಗಿದ್ದಾರೆ.


ಈ ಸಂದರ್ಭದಲ್ಲಿ ಕರವೇ ಗೋವಾ ರಾಜ್ಯ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕರವೇ ಯುವ ಘಟಕದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top