ಉಡುಪಿ: ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಸ್ಥಳೀಯ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಮಧ್ವಜಯಂತೀ ಉತ್ಸವವು ಭಾನುವಾರ ನಡೆಯಿತು. ಮಧ್ವಗುರುಗಳ ಭಾವಚಿತ್ರ, ಮಧ್ವವಿರಚಿತ ಮಹಾಭಾರತ ತಾತ್ಪರ್ಯ ನಿರ್ಣಯಗ್ರಂಥಕ್ಕೆ ಪುಷ್ಪಾಲಂಕಾರಗೈದು, ಶ್ರೀ ಹರಿವಾಯುಸ್ತುತಿ, ದ್ವಾದಶ ಸ್ತೋತ್ರಾದಿಗಳ ಪಾರಾಯಣ ಮಹಿಳಾ ಸದಸ್ಯರಿಂದ ಭಜನೆ, ಆಚಾರ್ಯ ಮಧ್ವರ ಮಹಿಮೆಗಳ ಸ್ಮರಣೆ ನೆರವೇರಿತು. ಬಳಿಕ ಪ್ರತೀ ಭಕ್ತರೂ ದೀಪ ಬೆಳಗಿಸಿದ ನಂತರ ಮಂಗಳಾರತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಸಮಿತಿ ಅಧ್ಯಕ್ಷ ಕೃಷ್ಣರಾಜ ಭಟ್ ಕಾರ್ಯದರ್ಶಿ ನಾಗರಾಜ ಭಟ್, ಲಕ್ಷ್ಮೀನಾರಾಯಣ ಆಚಾರ್ಯ ಶ್ರೀಪತಿ ಭಟ್, ಶ್ಯಾಮಲಾ ಭಟ್ ಕವಿತಾ ಆಚಾರ್ಯ, ಇಂದಿರಾ ಕರಣಿಕ್, ಲಕ್ಷ್ಮೀ ಪ್ರಸನ್ನಾಚಾರ್ಯ, ರಮೇಶ ಬಾರಿತ್ತಾಯ, ಗೋವಿಂದ ಐತಾಳ್, ವಾಗೀಶ ಭಟ್ ಮೊದಲಾದವರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ ಪೂಜೆ ನೆರವೇರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ