ಅದೊಂದು ದಿನ ಎಂಟು ಗಂಟೆ ರಾತ್ರಿ ಸಂಜನಾ ಕೆಲಸ ಮುಗಿಸಿ ಆಶ್ರಮಕ್ಕೆ ಹೋಗುವಾಗ ದಾರಿ ಮಧ್ಯೆ ಹುಚ್ಚುಡುಗ್ರು ಕುಡಿತ ಸಂಜನಾಳ ಬೆನ್ನಿಗೆ ಬಾಟ್ಲಿಯನ್ನು ಬಿಸಾಡಿ ಅವಳ ಸುತ್ತ ತಿರುಗಿ ಅವಳ ಮುಖವನ್ನು ಸವರಿಸಿ ಎಲ್ಲಿಗೆ ಹೋಗ್ತಿ ನಿನ್ನ ಬಿಡಲ್ಲ ಹೇಳ್ತಾ ಹತ್ತಿರ ಬಂದಾಗ ಸಂಜನಾ ಯಾರಾದ್ರೂ ಕಾಪಾಡಿ ಎಂದು ಕಣ್ಮುಚ್ಚಿ ಕಿರಿಚಿದಳು. ಆಗ ಅದೊಂದು ಕಾರು ಬಂದು ಪಕ್ಕದಲ್ಲಿ ನಿಂತಿತು. ಆತ ಸಂಜಯ್ ಅದೇ ಊರಿನ ರಾಜನ ಮಗ. ಹುಚ್ಚುಡುಗ್ರು ಆತನಿಗೆ ಕೈ ಮುಗಿದು ಸಂಜನಾಳ ಕಾಲಿಗೆ ಬಿದ್ದು ದಯವಿಟ್ಟು ಕ್ಷಮಿಸಿ ಹೇಳಿ ಅಲ್ಲಿಂದ ಹೊರಟು ಹೋದರು. ಸಂಜನಾ ನಿಂತಲ್ಲೇ ನಿಂತು ಕೈಮುಗಿದು ನೀವು ಯಾರು ಅಂತ ಗೊತ್ತಿಲ್ಲ? ಆದರೆ ನಿಮ್ಮಿಂದ ನನ್ನ ಪ್ರಾಣ ಉಳಿಯಿತು ಹೇಳಿ ಅಲ್ಲಿಂದ ಸಂಜನಾ ಹೋದಳು. ಸಂಜಯ್ ಮಾತ್ರ ಅವಳ ಮುಖವನ್ನು ನೋಡಿ ಅಲ್ಲಿಯೇ ಕಳೆದು ಹೋಗಿದ್ದ.
ಮರುದಿನ ಅದೇ ಗಂಟೆ ಸರಿಯಾಗಿ ಸಂಜಯ್ ಅವಳಿಗೆ ಕಾಯುತ್ತ ಇದ್ದ. ಸಂಜನಾ ಹೆದರಿಕೆಯಿಂದ ಬರ್ತಾ ಇದ್ಲು. ಆವಾಗ ಸಂಜಯ್- ಹೆದರಬೇಡ, ನಾನು ಇದ್ದೇನೆ ಇನ್ನೂ ಮುಂದೆ ಹೇಳಿದ. ನಂತರ ಇವರ ಪರಿಚಯ ಗೆಳೆತನವಾಗಿ, ಗೆಳೆತನ ಪ್ರೀತಿ ಆಯಿತು. ಆದರೆ ಸಂಜನಾ ಅನಾಥೆ ಆಗಿದ್ದರಿಂದ ಅವನ ತಂದೆ ತಾಯಿ ಇಬ್ಬರೂ ಮದುವೆ ಆಗಬೇಡ ಹೇಳಿದ್ದರು. ಆದರೆ ಸಂಜಯ್ ಅದೇ ದಾರಿ ಮಧ್ಯೆ ಮದುವೆ ಮಾಡಿ ಮನೆಗೆ ಹೋದ ಸಂಜಯ್ ತಾಯಿ ಸಿಟ್ಟಿನಿಂದ ಲೇ, ಯಾರೇ ನೀನು, ಭಿಕಾರಿ ಆಸ್ತಿಗೆ ಕಣ್ಣು ಹಾಕಿ ಮದುವೆ ಆದಿಯಾ? ನಿನಗೆ ಈ ಮನೆಯಲ್ಲಿ ಜಾಗ ಇಲ್ಲ, ಹೊರಟು ಹೋಗು ಹೇಳಿದಳು. ಅದರೆ ಸಂಜಯ್ ಅವಳ ಜೊತೆ ಅವಳನ್ನು ಬಿಡದೆ, ಅವಳು ಇದ್ದ ಆಶ್ರಮಕ್ಕೆ ಬಂದ. ಕೆಲವು ವರ್ಷಗಳ ಕಾಲ ಅಲ್ಲಿಯೇ ಇದ್ದು ಒಂದು ಸಣ್ಣ ಮನೆ ಮಾಡಿ ಜೀವನ ನಡೆಸುತ್ತಾ ಕೆಲವು ವರ್ಷ ನಂತರ ಸಂಜಯ್ ಅದೇ ಊರಿನ ರಾಜನಾದ.
- ದೀಕ್ಷಾ ಗೌಡ . ಜೆ
ವಾಣಿಜ್ಯ ವಿಭಾಗ,
ವಿವೇಕಾನಂದ ಕಾಲೇಜು, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ