ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಪುನೀತ್ ರಾಜ್ (ಕೊಂಬಾರು ನಿವಾಸಿ ದಿ.ಅಪ್ಪಣ್ಣ ಹಾಗೂ ದಿ.ಗಿರಿಜಾ ಇವರ ಪುತ್ರ), ಅವಿನ್ ಎಂ (ಮಡ್ನೂರು ನಿವಾಸಿ ಎ ಎಚ್ . ಚಂದ್ರಶೇಖರ ಹಾಗೂ ಗೀತಾ ದಂಪತಿಯ ಪುತ್ರ) ಮತ್ತು ಕೆ.ಎಸ್ ಕಿರಣ್ ಕುಮಾರ್ (ಮುಂಡೂರು ನಿವಾಸಿ ಕೆ.ಸುಬ್ರಾಯ ಹಾಗೂ ಮೀನಾಕ್ಷಿ ಪಿ ಇವರ ಪುತ್ರ) ಇವರು ಭಾರತ ಸರಕಾರದ ಅಗ್ನಿಪಥ್ ಯೋಜನೆಯಡಿಯಲ್ಲಿ ಮೂರು ಹಂತದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.
ಈ ಮೂವರೂ ವಿದ್ಯಾರ್ಥಿಗಳು ಅತ್ಯುತ್ತಮ ಕ್ರೀಡಾಪಟುಗಳಾಗಿದ್ದು ಇದೀಗ ಮೂವರೂ ಬೇರೆ ಬೇರೆ ಸ್ಥಳಗಳಾದ ಲಕ್ನೋ, ಮಧ್ಯಪ್ರದೇಶ ಹಾಗೂ ನಾಸಿಕ್‌ನಲ್ಲಿ ತಮ್ಮ ತರಬೇತಿಯನ್ನು ಪಡೆಯಲು ತೆರಳಿದ್ದಾರೆ. ಇವರಿಗೆ ಎನ್‌ಸಿಸಿ ಘಟಕದ ಮುಖ್ಯಸ್ಥ ಲೆ.ಭಾಮಿ ಅತುಲ್ ಶೆಣೈ ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್‌ಸಿಸಿ ಘಟಕ, ಐಕ್ಯೂಎಸಿ ಘಟಕ, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದ ಶುಭಾಶಯ ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ