ಸುರತ್ಕಲ್: ಪೋಲಿಯೋ ಮುಕ್ತ ವಿಶ್ವ ನಿರ್ಮಾಣಕ್ಕೆ ಅಂತರ್‌ರಾಷ್ಟ್ರೀಯ ರೋಟರಿ ಸಂಸ್ಥೆಯ ಕೊಡುಗೆ ಅಪಾರ. ನಿರ್ದಿಷ್ಟ ಕಾರ್ಯ ಯೋಜನೆಗಳ ಮೂಲಕ ಪೋಲಿಯೋ ನಿರ್ಮೂಲನದ ಅಭಿಯಾನವನ್ನು ಜಾಗತಿಕ ಮಟ್ಟದಲ್ಲಿ ರೋಟರಿ ಸಂಸ್ಥೆ ನಡೆಸುತ್ತಿದೆ ಎಂದು ರೋಟರಿ ಜಿಲ್ಲಾ 3181ರ ಗವರ್ನರ್ ರೊ.ವಿಕ್ರಮದತ್ತ ನುಡಿದರು.
ಅವರು ಸುರತ್ಕಲ್ ಮೇಲು ಸೇತುವೆ ಕೆಳಗಿನ ಎಂ.ಸಿ.ಎಫ್ ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ವಿಶ್ವ ಪೋಲಿಯೋ ದಿನಾಚರಣೆಯ ಅಂಗವಾಗಿ ಸುರತ್ಕಲ್ ರೋಟರಿ ಕ್ಲಬ್, ಬೈಕಂಪಾಡಿ ರೋಟರಿ ಕ್ಲಬ್, ಮಂಗಳೂರು ಪೋರ್ಟ್ ಟೌನ್ ರೋಟರಿ ಕ್ಲಬ್‌ಗಳು ರೋಟರಿ ವಲಯ 2 ಮತ್ತು ವಲಯ 3ರ ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಆಚರಿಸಿದ ಪೋಲಿಯೋ ಮುಕ್ತ ಸಮಾಜದ ಪ್ರಕಾಶ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ರೋಟರಿ ಸದಸ್ಯನು ಪೋಲಿಯೋ ಮುಕ್ತ ಸಮಾಜದ ನಿರ್ಮಾಣದ ಸದುದ್ದೇಶದಿಂದ ಆರ್ಥಿಕ ನೆರವು ನೀಡುತ್ತಿದ್ದು ಉದ್ದೇಶಿತ ಗುರಿ ತಲುಪಲು ಸಾಧ್ಯವಾಗಿದೆ ಎಂದು ಅವರು ನುಡಿದರು.
ಸುರತ್ಕಲ್ ರೋಟರಿ ಕ್ಲಬ್‌ನ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ ಸ್ವಾಗತಿಸಿದರು. ವಲಯ ಲೆಫ್ಟಿನೆಂಟ್ ಗಣೇಶ್ ಎಂ. ವಂದಿಸಿದರು.
ಜಿಲ್ಲಾ ರೋಟರಿ ಕಾರ್ಯದರ್ಶಿ ರಿತೇಶ್ ಬಾಳಿಗ, ಸಹಾಯಕ ಗವರ್ನರ್‌ಗಳಾದ ಅಶೋಕ್ ಉಜ್ಜೋಡಿ, ವಿಶ್ವನಾಥ್ ಶೆಟ್ಟಿ, ಕೃಷ್ಣ ಎಂ. ಹೆಗ್ಡೆ, ಮಂಗಳೂರು ಪೋರ್ಟ್ ಟೌನ್ ರೋಟರಿ ಕ್ಲಬ್‌ನ ಅಧ್ಯಕ್ಷ ಗೋಪಾಲಕೃಷ್ಣ ಮಯ್ಯ, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್‌ನ ಅಧ್ಯಕ್ಷ ಬ್ರ್ಯಾನ್ ಪಿಂಟೋ, ರೋಟರಿಕ್ಲಬ್‌ನ ವಲಯ ಲೆಫ್ಟಿನೆಂಟ್‌ಗಳಾದ ರಾಜೇಶ್ ಶೆಟ್ಟಿ. ಚಂದ್ರಕಾಂತ ಮರಾಠೆ, ನವೀನ್ ಬರ್ಕೆ, ಜಿಲ್ಲಾ ರೋಟರ‍್ಯಾಕ್ಟ್ ಚೇರ್‌ಮ್ಯಾನ್ ಯಶೋಮತಿ ಹಾಗೂ ವಿವಿಧ ರೋಟರಿ ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ರೋರ‍್ಯಾಕ್ಟ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ