'ಥೆರೇಸಮ್ಮ (ಮದರ್)' ಏಕವ್ಯಕ್ತಿ ಪ್ರಯೋಗ

Upayuktha
0

ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ಹೆಲೆನ್ ಮೈಸೂರು ಅಭಿನಯದಲ್ಲಿ


ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಕನ್ನಡ ಸಂಘ ಹಾಗೂ ಕ್ರೈಸ್ತ ವಿದ್ಯಾಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ ಆಯೋಜಿಸಿದ ರಂಗ ಬದುಕು  ಟ್ರಸ್ಟ್ (ರಿ) ಬೆಂಗಳೂರು ಪ್ರಸ್ತುತಿಯಲ್ಲಿ  'ಮಾನವತಾವಾದಿ ಥೆರೇಸಮ್ಮ (ಮದರ್)' ಎಂಬ  ಏಕವ್ಯಕ್ತಿ ಪ್ರಯೋಗ ನಡೆಯಿತು.


ಮಂಗಳೂರು ವಿಶ್ವವಿದ್ಯಾನಿಯ, ಕ್ರೈಸ್ತ ವಿದ್ಯಾಪೀಠದ ಮುಖ್ಯಸ್ಥರಾದ ವಂ. ಡಾ. ಐವನ್ ಡಿ'ಸೋಜ ಮಾತನಾಡಿ ಮದರ್ ಥೆರೇಸ ಬಡವರ, ರೋಗಿಗಳ, ಅನಾಥರ ಮತ್ತು ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಒಬ್ಬ ಮಾನವತಾ ವಾದಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ತೆರೇಸಾರವರ ನಿಸ್ವಾರ್ಥ ಸೇವೆಯ ಕುರಿತು ಹೇಳಿದರು.


ಡಾ. ಬೇಲೂರು ರಘುನಂದನ್ ಅವರು ರಚಿಸಿ, ವಿನ್ಯಾಸ, ಸಂಗೀತ ಹಾಗೂ ನಿರ್ದೇಶನ ಮಾಡಿರುವ  'ಮಾನವತಾವಾದಿ ಥೆರೇಸಮ್ಮ (ಮದರ್)' ಎಂಬ ಏಕವ್ಯಕ್ತಿ ಪ್ರಯೋಗವನ್ನು ಡಾ. ಹೆಲೆನ್ ಮೈಸೂರು ಅವರು ಮದರ್ ತೆರೇಸಾ ಅವರ ಬದುಕು, ವ್ಯಕ್ತಿತ್ವ ಹಾಗೂ ಸಮಾಜ ಸೇವೆಯ ವಿವಿಧ ಆಯಾಮಗಳನ್ನು ತಮ್ಮ ಅಭಿನಯದ ಮೂಲಕ ವೈಶಿಷ್ಟ ಪೂರ್ಣವಾಗಿ ತೋರಿಸಿಕೊಟ್ಟರು.


ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ  ಮದರ್ ತೆರೇಸಾ ಅವರ ಸಮಾಜ ಸೇವೆಯ ಕುರಿತು ಮಾತನಾಡಿದರು.


ಈ ಸಂದರ್ಭದಲ್ಲಿ ಏಕವ್ಯಕ್ತಿ ಪ್ರಯೋಗದ ರಚನೆಕಾರರಾದ ಡಾ. ಬೇಲೂರು ರಘುನಂದನ್ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ/ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾಲೇಜಿನ ಕನ್ನಡ ಸಂಘದ ನಿರ್ದೇಶಕರಾದ ರಾಮ ನಾಯ್ಕ್ ಸ್ವಾಗತಿಸಿ, ಉಪನ್ಯಾಸಕರಾದ ಉಷಾ ಎ  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top