ಕಾಂಗ್ರೆಸ್ ಹಿಂದೂಗಳನ್ನು ದಮನಿಸಿದಷ್ಟೂ ಸಮಾಜ ಬಲಿಷ್ಠವಾಗುತ್ತದೆ: ಶಾಸಕ ಡಾ. ಭರತ್ ಶೆಟ್ಟಿ ವೈ

Upayuktha
0


ಕಾವೂರು: ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪಕ್ಷ ಹುಬ್ಬಳ್ಳಿ ಘಟನೆ, ಹಿಜಾಬ್ ಹೋರಾಟ ಸಹಿತ ಮುಸ್ಲಿಂ ವರ್ಗದ ಪೊಲೀಸ್‌ ಕೇಸುಗಳನ್ನು ವಾಪಸ್ ಪಡೆದು ಹಿಂದೂಗಳ ಮೇಲಿನ ಕೇಸ್ ಹಿಂದಕ್ಕೆ ಪಡೆಯದೆ ದಮನಕಾರಿ ನೀತಿ ಅನುಸರಿಸುತ್ತಿದೆ. ಸರಕಾರ ಹಚ್ಚುತ್ತಿರುವ ತಾರತಮ್ಯದ ಬೆಂಕಿ ಭವಿಷ್ಯದಲ್ಲಿ ಕಾಂಗ್ರೆಸ್‌ನ್ನು ಸುಡಲಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿವೈ ಹೇಳಿದರು.


ನಿಮ್ಮಸರಕಾರದ ಹಗರಣವನ್ನು ಮರೆ ಮಾಚಲು ವಿಷಯಾಂತರ ಮಾಡುತ್ತಿರುವುದು ತಿಳಿಯದ ವಿಚಾರವಲ್ಲ. ರಾಜ್ಯವನ್ನು ಅಭಿವೃದ್ಧಿಯತ್ತಾ ಕೊಂಡೊಯ್ಯುವ ಬದಲು ಹಿಂದೂಗಳನ್ನು ಬಗ್ಗು ಬಡಿಯುವ ಕೆಲಸಕ್ಕೆ ಕೈ ಹಾಕಿರುವುದು ದುರಂತ.


ನಿಮ್ಮ ಸರಕಾರ ಹಿಂದೂಗಳನ್ನು ತುಳಿದಷ್ಟೂ ಹಿಂದೂ ಸಮಾಜ ಬಲಿಷ್ಠವಾಗುತ್ತಾ ಹೋಗುತ್ತದೆ. ಕೇವಲ ಅಲ್ಪ ಸಂಖ್ಯಾತರ ಮತದಿಂದ ಮಾತ್ರ ನಿಮ್ಮಸರಕಾರ ಅಸ್ಥಿತ್ವಕ್ಕೆ ಬಂದಿಲ್ಲ. ಹಿಂದೂ ಸಮುದಾಯವೂ ನಿಮ್ಮನ್ನು ಬೆಂಬಲಿಸಿ ಅಧಿಕಾರದಲ್ಲಿ ಕೂರಿಸಿದ್ದಾರೆ. ಇದೀಗ ಕೇವಲ ಒಂದು ವರ್ಗಕ್ಕೆ ಮಾತ್ರ ಸವಲತ್ತು, ಕಾನೂನು ವಾಪಾಸ್‌ ಮತ್ತಿತರ ಸೌಲಭ್ಯ ಕಲ್ಪಿಸುತ್ತಿರುವುದು ಹಿಂದೂ ವಿರೋಧಿ ಎಜೆಂಡಾದ ಒಂದು ಸಂಚು ಎಂದು ಆರೋಪಿಸಿರುವ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು,  ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿ ವಿರುದ್ದ ಬಿಜೆಪಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top