ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಅ. 26 ಮತು 27ರಂದು ನಡೆಸಲು ಉದ್ದೇಶಿಸಿದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರೀ ಜಪಯಜ್ಞದ ಆಹ್ವಾನ ಪತ್ರಿಕೆಯನ್ನು ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಶಿಲೆ ಶಿಲೆ ಆಡಳಿತ ಮೊಕ್ತೇಸರರು ಹಾಗೂ ಗಾಯತ್ರಿ ಸಂಗಮದ ಮಹಾಪೋಷಕರಾದ ಶರವು ರಾಘವೇಂದ್ರ ಶಾಸ್ತಿçಗಳು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ರಾಘವೇಂದ್ರ ಶಾಸ್ತಿçಗಳು, ಈ ಯಾಗವು ಇಡೀ ಸಮುದಾಯ ಒಂದಾಗಲು ವೇದಿಕೆಯಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಸಮುದಾಯದ ಎಲ್ಲ ಮನೆಗಳನ್ನು ಸಂಪರ್ಕಿಸಲು ಇದೊಂದು ರಹದಾರಿಯಾಗಬೇಕು. ಆ ಮೂಲಕ ನಾವೆಲ್ಲರೂ ಒಂದಾಗಬೇಕು. ಜಿಲ್ಲೆಯ ಎಲ್ಲ ಪುರೋಹಿತರು, ಸಹಾಯಕ ಪುರೋಹಿತರು, ಸಂಸ್ಕೃತ ಶಿರೋಮಣಿಗಳು, ವೇದಜ್ಞರು ಮಾತ್ರವಲ್ಲದೆ ಮನೆ ಮನೆಯ ಎಲ್ಲರೂ ಭಾಗವಹಿಸುವಂತಾಗಬೇಕು ಎಂದರು.
ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಮಾತನಾಡಿ, ಇಡೀ ಸಮುದಾಯ ಒಂದಾಗಿಸುವ ನಿಟ್ಟಿನಲ್ಲಿ ಮನೆ ಮನೆಗಳಲ್ಲಿ ಗಾಯತ್ರಿ ಮಂತ್ರ ಹಾಗೂ ಮಾತೆಯರು ಸರ್ವಮಂಗಳ ಮಾಂಗಲ್ಯ ಸ್ತೋತ್ರ ಪಠಣ ಆರಂಭಿಸಿದ್ದಾರೆ. ಇದೊಂದು ಸಮುದಾಯದಲ್ಲಿ ಸಂಚಲನ ಮೂಡಿಸಿದೆ ಎಂದರು.
ಸAಚಾಲಕರಾದ ಸುರೇಶ್ ರಾವ್ ಚಿತ್ರಾಪುರ, ಯಾಗ ಸಮಿತಿಯ ಕಗ್ಗಿ ಶ್ರೀನಿವಾಸ ಆಚಾರ್, ಕೋಶಾಧಿಕಾರಿ ಉದಯ ಕುಮಾರ್ ಸ್ವಾಗತ ಸಮಿತಿಯ ಶ್ರೀಕರ ದಾಮ್ಲೆ, ಜಪ ಸಮಿತಿಯ ರವೀಶ್ ನಾರ್ಶ, ಮಾತೃ ಸಮಿತಿಯ ಚೇತನ ದತ್ತಾತ್ರೇಯ, ಶೋಭಾ ಚಿತ್ರಾಪುರ, ಹೇಮಪ್ರಭ ಸಂತೋಷ್, ಉಪಾಧ್ಯಕ್ಷರಾದ ಎಂ.ಎಸ್. ಗುರುರಾಜ್, ಅಂ.ಆರ್.ಡಿ. ಶಾಸ್ತಿç, ರಾಜೇಂದ್ರ ಕಲ್ಬಾವಿ, ವಿಶ್ವೇಶ್ವರ ಬದೆವಿದೆ, ನ್ಯಾಯವಾದಿ ಸದಾಶಿವ ಐತಾಳ್, ಶಿವಳ್ಳಿ ಸ್ಪಂದನದ ಕೃಷ್ಣರಾಜ, ದತ್ತಾತ್ರೇಯ, ಸದಸ್ಯರಾದ ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ