ಮಾಹೆ ತಲುಪಿದ ಸ್ಪ್ರಿಂಗರ್ ನೇಚರ್ ಇಂಡಿಯಾ ಟೂರ್

Upayuktha
0


ಮಂಗಳೂರು:
ಬಿಟ್ಸ್ ಪಿಲಾನಿ ಕೆ.ಕೆ. ಬಿರ್ಲಾ ಕ್ಯಾಂಪಸ್ ಮತ್ತು ಗೋವಾದ ನೌಕಾ ಯುದ್ಧ ಕಾಲೇಜಿನಲ್ಲಿ ತಂಗಿದ ಬಳಿಕ ಸ್ಪ್ರಿಂಗರ್ ನೇಚರ್ ಇಂಡಿಯಾ ರಿಸರ್ಚ್ ಟೂರ್ 2024 ತನ್ನ ಪಯಣವನ್ನು ಪ್ರತಿಷ್ಠಿತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆವರಣವನ್ನು ತಲುಪಿದೆ.


ಈ ಕಾರ್ಯಕ್ರಮವು "ಮುಕ್ತ ಪ್ರವೇಶದ ಮೂಲಕ ಸಂಶೋಧನೆಯನ್ನು ಸಬಲೀಕರಣಗೊಳಿಸುವ" ಕುರಿತು ಆಕರ್ಷಕವಾದ ಚರ್ಚಾ ಗೋಷ್ಠಿಯನ್ನು ಒಳಗೊಂಡಿದ್ದು, ಜಾಗತಿಕ ಸಂಶೋಧನೆಯನ್ನು ಪ್ರಜಾಸತ್ತಾತ್ಮಕಗೊಳಿಸುವಲ್ಲಿ ಮುಕ್ತ ಪ್ರವೇಶದ ಪರಿವರ್ತಕ ಶಕ್ತಿಯನ್ನು ಇದು ಅನ್ವೇಷಿಸುವಲ್ಲಿ ಯಶಸ್ವಿಯಾಗಿದೆ.


ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ ಉಪ ನಿರ್ದೇಶಕರಾದ ಡಾ. ಸಿಲಿ ರೌಟ್, ಸ್ಪ್ರಿಂಗರ್ ನೇಚರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಸರ್ವಸಿದ್ದಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.


ಮುಕ್ತ ಪ್ರವೇಶವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಮಾಹೆ, ಸ್ಪ್ರಿಂಗರ್ ನೇಚರ್ ಜೊತೆಗೆ ಪರಿವರ್ತಕ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೊದಲ ಸಂಸ್ಥೆಗಳಲ್ಲಿ ಒಂದಾಗಿದೆ. ಮಾಹೆ ಸಂಶೋಧಕರಿಗೆ ತಮ್ಮ ಕೃತಿಗಳನ್ನು 2,000ಕ್ಕೂ ಹೆಚ್ಚು ಸ್ಪ್ರಿಂಗರ್ ಹೈಬ್ರಿಡ್ ನಿಯತಕಾಲಿಕಗಳಲ್ಲಿ ಪ್ರಕಟಿಸಲು ಈ ಒಪ್ಪಂದವು ಅನುವು ಮಾಡಿಕೊಡುತ್ತದೆ. ಅದಕ್ಕೆ ತಗಲುವ ಪೂರ್ಣ ಶುಲ್ಕವೂ ಇದರಲ್ಲೇ ಒಳಗೊಂಡಿರುತ್ತದೆ ಎಂದು ಇಂಡಿಯಾ ರಿಸರ್ಚ್ ಟೂರ್ 2024 ಮಣಿಪಾಲದಿಂದ ಹೊರಟು ಕೇರಳಕ್ಕೆ ಪಯಣಿಸಲಿದ್ದು, ಐಐಟಿ-ಕೋಝಿಕೋಡ್ ಮತ್ತು ತಿರುವನಂತಪುರಂನ ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡೀಸ್ ಮುಂತಾದ ಸಂಸ್ಥೆಗಳಿಗೆ ಭೇಟಿ ನೀಡಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 





Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top