ಚೇತನ್.ಸಿ. ರಾಯನಹಳ್ಳಿಯವರಿಗೆ ಸದ್ಭಾವನಾ ಸೇವಾರತ್ನ ಪ್ರಶಸ್ತಿ ಪ್ರದಾನ

Upayuktha
0


ವಿಜಯನಗರ: 
ರಂಗಭೂಮಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ವಿಜಯನಗರ ಜಿಲ್ಲೆಯ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರು (ರಿ) ಸಂಘದ ವತಿಯಿಂದ ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ನೀಡುವ "ಸದ್ಭಾವನಾ ಸೇವಾರತ್ನ" ಪ್ರಶಸ್ತಿಯನ್ನು ಶಿವಮೊಗ್ಗದ ನಮ್ಮ ಹಳ್ಳಿ ಥಿಯೇಟರ್ ನ (ರಿ) ಅಧ್ಯಕ್ಷರು ಹಾಗೂ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಗ್ರಂಥಪಾಲಕರು ಹಾಗೂ ಶಿಕ್ಷಕರಾದ ಚೇತನ್.ಸಿ. ರಾಯನಹಳ್ಳಿಯವರಿಗೆ ನೀಡಿ ಗೌರವಿಸಲಾಯಿತು.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top