ಸಿದ್ದರಾಮಯ್ಯನವರ ಮುಡಾ ಹಗರಣ ಹೊರ ಹಾಕಿದ್ದು ಡಿ.ಕೆ.ಶಿವಕುಮಾರ್-ಗಾಲಿ ಜನಾರ್ಧನರೆಡ್ಡಿ

Upayuktha
0


ಬಳ್ಳಾರಿ:
ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಈ ವರೆಗೆ ಬಿಜೆಪಿ ಗೆದ್ದಿಲ್ಲ ಎಂಬ ಮಾತನ್ನು ನೀವು ಈ ಚುನಾವಣೆಯಲ್ಲಿ ತೆಗೆದು ಹಾಕಬೇಕು, 2028 ರಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಅದಕ್ಕೆ ಈ ಸಂಡೂರು ಉಪ ಚುನವಣೆಯ ಫಲಿತಾಂಶದಿಂದ ಆರಂಭವಾಗಲಿ ಎಂದು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಕರೆ ನೀಡಿದರು. ಅವರು ನಗರದ ತಮ್ಮ ನಿವಾಸದ ಸಭಾಂಗಣದಲ್ಲಿ ಕುರುವ ಸಮುದಾಯದ ಜನರ ಸಭೆ ನಡೆಸಿ ಮಾತನಾಡುತ್ತಿದ್ದರು. ಹಾಲು ಮತ ಸಮಾಜದ ಬೆಂಬಲ ಇದ್ದುದರಿಂದಲೇ ಈ ಹಿಂದೆ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಸಾಧ್ಯವಾಯ್ತು. ಗಂಗಾವತಿ ಕ್ಷೇತ್ರದಲ್ಲೂ ನಿಮ್ಮ ಸಮುದಾಯ ನನಗೆ ಬೆಂಬಲ ನೀಡಿದೆ ಎಂದರು.


ಸಿದ್ದರಾಮಯ್ಯ ಹೇಳಿದ್ದಾರೆ ಸಂಡೂರು ಕ್ಷೇತ್ರ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲುಗೆ ಚುನಾವಣೆ ಉಸ್ತುವಾರಿ ನೀಡಿದರೂ ಎದಿರಿಸುವುದಾಗಿ ಹೇಳಿದ್ದಾರೆ ನಾವು ಕೂಡಾ ಅವರು ಯಾರನ್ನೇ ನಿಲ್ಲಿಸಿದರೂ ಕೂಡಾ ಎದುರಿಸಲು ಸಿದ್ದವಾಗಿರಬೇಕು ಎಂದರು. ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡ್ತಾರೆ. ಮಾಡಲಿ ಅದು ಅವರಿಗೆ ಬಿಟ್ಟ ವಿಚಾರ. ಅವರ ಬಗ್ಗೆ ಕೆಟ್ಟದಾದ ಅಭಿಪ್ರಾಯ ನನಗೆ ಇಲ್ಲ. ಲಕ್ಷ ಕೋಟಿ ಲೂಟಿ ಮಾಡಿದರು ಎಂದು ಅಪಪ್ರಚಾರ ಮಾಡಿದರೂ ನಾನು ಒಂದು ನೂರು ರೂ ಸಹ ಯಾರನ್ನು ಎದಿರಿಸಿ ಬೆದರಿಸಿ ಪಡೆದಿಲ್ಲವೆಂದರು.


ಮುಡಾ ಹಗರಣ:-ಮುಡಾ ಹಗರಣದಿಂದ ಸಿದ್ದರಾಮಯ್ಯಗೆ ತೊಂದರೆ ಆಗುತ್ತಿರುವುದು. ಜನಾರ್ಧನರೆಡ್ಡಿ ಇಲ್ಲಾ ಬಿಜೆಪಿಯಿಂದ ಅಲ್ಲ. ಸ್ವತಃ ಅವರ ಪಕ್ಷದ ಡಿ.ಕಿ.ಶಿವಕುಮಾರ್ ಮತ್ತು ಅವರ ಕುಟುಂಬದಿಂದಲೇ ಎಂದು ಆರೋಪಿಸಿದರು. ಸಿದ್ದರಾಮಯ್ಯ ಅಧಿಕಾರ ಬಿಡಲ್ಲ ಎಂದು ಅವರ ಪಕ್ಷದಿಂದಲೇ ಮುಡಾ ಹಗರಣ ಹೊರಗೆ ಬಂದಿದೆ ಎಂದರು.


ನನ್ನ ಕನಸು:-ಕಾರ್ಖಾನೆಗಳನ್ನು 50 ಸಾವಿರ ಎಕರೆಯಲ್ಲಿ ನಿರ್ಮಾಣ ಆಗಬೇಕು, ಇನ್ನುಳಿದ 50 ಸಾವಿರ ಎಕರೆಯಲ್ಲಿ ವಿದ್ಯಾ ಕೇಂದ್ರಗಳು ನಿರ್ಮಾಣ ಆಗಬೇಕು. ಅದರಿಂದ ಹತ್ತು ಲಕ್ಷ ಜನರಿಗೆ ಉದ್ಯೋಗ ದೊರೆಯುವಂತಾಗಬೇಕು. ಅಂತಹ ಮೆಗಾ ಸಿಟಿಯನ್ನು ಬಳ್ಳಾರಿ ಸಂಡೂರು  ಹೊಸಪೇಟೆ ನಡುವೆ ನಿರ್ಮಾಣ ಮಾಡಬೇಕು ಎಂಬ ಕನಸು ನನ್ನದು ಎಂದರು.


ಜಿಲ್ಲೆಯ ಐದು ಶಾಸಕರು ಐದು ದಿಕ್ಕಿಗೆ ಇದ್ದಾರೆ. ಅದಕ್ಕಾಗಿ ಕೆಎಂಆರ್‌ಇಸಿ ಹಣವನ್ನು ಸರಿಯಾಗಿ ಬಳಿಸಿಕೊಂಡಿಲ್ಲ. ಕಾಮಗಾರಿಗಳಲ್ಲಿ ಕಮೀಷನ್  ಹಂಚಿಕೊಳ್ಳಲು ಒಳ ಜಗಳ ಮಾಡುತ್ತ ಈ ವರೆಗೆ ಗಣಗಾರಿಕೆಯಿಂದ ಬರುವ ತೆರಿಗೆ ಹಣ ಬಳಸಿಕೊಳ್ಳಲು ಆಗಿಲ್ಲ ಎಂದು ಆಗ್ರಹವನ್ನು ವುಕ್ತ ಪಡಿಸಿದರು. ಸಂಡೂರಿಗೆ ಸಿಮೆಂಟ್ ರಸ್ತೆಗಳು ಆಗಿದ್ದು ಈ ಜನಾರ್ಧನರೆಡ್ಡಿಯಿಂದ ಎಂಬುದು ಜನತೆಗೆ ಗೊತ್ತಿದೆ. ಸಂಡೂರು ಕ್ಷೇತ್ರದ 127 ಪ್ರತಿ ಗ್ರಾಮಗಳಿಗೂ ಬರುವೆ. ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹರಿಸುವ ಕಾರ್ಯ


ಮಾಡುವೆ.ಜಿಲ್ಲೆಯ ಬಗ್ಗೆ ವಿಧಾನ ಸಭೆಯಲ್ಲಿ ಧ್ವನಿ ಎತ್ತಲು ಶಾಸಕರು ಇಲ್ಲ ಅದಕ್ಕಾಗಿ ಸಂಡೂರಿನಿಂದ ಉಪ ಚನಾವಣೆಯಲ್ಲಿ ಆಯ್ಕೆ ಮಾಡಿ ಎಂದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದಿಂದಲೇ ಎಂಪಿ ಯನ್ನು ಮಾಡಲು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಂತಹವರಿಗೆ ಪಾಠ ಕಲಿಸಬೇಕಲ್ಲವೇ, ಬಡ ಜನರಿಗೆ ದೊರೆಯಬೇಕಾದ ಹಣ ಚುನಾವಣೆಗೆ ಬಳಸಿದ್ದನ್ನು ಪ್ರಶ್ನಿಸಬೇಕು ಎಂದರು. 


ಸಂಗೊಳ್ಳಿ ರಾಯಣ್ಣ ಇದ್ದರೆ ಬ್ರಿಟೀಷರಿಗೆ ಉಳಿಗಾಲವಿಲ್ಲವೆಂದು ಆತನನ್ನು ನೇಣಿಗೆ ಏರಿಸಿದರು. ನಾನು ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬರಲು ಪ್ರಯತ್ನಿಸಿದೆ. ಅದೇ ರೀತಿ ದೇಶದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾನೆಂದು ಸೋನಿಯಾಗಾಂಧಿ ನನ್ನನ್ನು ಸುಳ್ಳು ಕೇಸು ಹಾಕಿಸಿ ಜೈಲಿಗೆ ಕಳುಹಿಸಿದರು ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top