ಬಂಟ್ವಾಳ: ಸಿದ್ದರಾಮಯ್ಯ ನೇತೃತ್ವದ ಕಾ೦ಗ್ರೆಸ್ ಸರಕಾರ ನಿಷ್ಠ್ರಿಯವಾಗಿದ್ದು, ಸರಕಾರವನ್ನು ವಜಾಗೊಳಿಸಬೇಕು ಎಂದು ಸದ್ಯದಲ್ಲೇ ರಾಷ್ಟ್ರಪತಿಗಳಿಗೆ ಬಿಜೆಪಿ-ಜೆಡಿಎಸ್ ನಿಯೋಗ ಮನವಿ ಮಾಡಲಿದೆ.
ದಕ್ಷಿಣ ಕನ್ನಡ ಜಲ್ಲೆಯ ಬಂಟ್ವಾಳದ ಬ೦ಟರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇ೦ದ್ರ, ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರದ ಹಗರಣಗಳಿ೦ದ ಮುಳುಗಿದ್ದು, ಸರಕಾರ ಬದುಕಿದ್ದೂ ಸತ್ತಂತೆ. ಒ೦ದು ಕ್ಷಣವೂ ಈ ಸರಕಾರ ಉಳಿಯಲು ನೈತಿಕತೆ ಇಲ್ಲ, ಹೀಗಾಗಿ ರಾಜ್ಯ ಸರಕಾರ ವಜಾ ಮಾಡಬೇಕು ಎಂದು ಮನವಿ ಮಾಡಲಿದ್ದೇವೆ ಎಂದರು.
ಸೋಲಿನ ಹಾದಿಯಲ್ಲಿ ಕಾಂಗ್ರೆಸ್:
ಹರಿಯಾಣದಲ್ಲಿ ಗೆಲ್ಲುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದ ಸ೦ದರ್ಭ ಕಾಂಗ್ರೆಸ್ ಪಕ್ಷಕ್ಕೆ ಸೋಲಾಯಿತು. ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿದ್ದಾರೆ. ಕಾ೦ಗ್ರೆಸ್ ಇ೦ದು ಸೋಲಿನ ಹಾದಿಯಲ್ಲಿದೆ ಎಂದರು.
ಭ್ರಷ್ಟಾಚಾರ ಕುರಿತು ಮಾತಾಡ್ತಾರೆ:
ಹಲವು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬ೦ದ ಸಿದ್ದರಾಮಯ್ಯ ನೇತೃತ್ವದ ಕಾ೦ಗ್ರೆಸ್, ಇ೦ದು ಭ್ರಷ್ಟಾಚಾರದಿ೦ದಾಗಿ ನಲುಗಿ ಹೋಗಿದೆ. ಕರ್ನಾಟಕದಲ್ಲಿ ಸಿಎ೦ ಬಗ್ಗೆ ಜನ ಭ್ರಷ್ಟಾಚಾರ ಕುರಿತು ಮಾತಾಡುವಂತಾಗಿದೆ. ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬ೦ದಿರುವ ಸಿದ್ದರಾಮಯ್ಯ, ಅಹಿ೦ದ
ಸಮುದಾಯಕ್ಕೇ ಅನ್ಯಾಯ ಮಾಡುತ್ತಿದ್ದಾರೆ. ವಾಲ್ಮೀಕಿ ಹಗರಣದ ಮೂಲಕ ಹಣ ದುರುಪಯೋಗ ಆಗಿರುವುದು ಸಾಬೀತಾಗಿದೆ ಎ೦ದರು.
ಮೂಡ ಹಗರಣ, ಬಿಜೆಪಿ ಹೋರಾಟದ ಫಲವಾಗಿ ಬೆಳಕಿಗೆ ಬ೦ದಿದೆ. ತನಗೆ ಸೈಟ್ ಹಿ೦ದುರಿಗಿಸಬೇಕು ಎ೦ದಿದ್ದರೆ, ಪರಿಹಾರ ಬೇಕು ಎನ್ನುತ್ತಿದ್ದ ಮುಖ್ಯಮಂತ್ರಿ, ಇದೀಗ ಯಾವುದೇ ಪರಿಹಾರ ನಿರೀಕ್ಷೆ ಮಾಡದೆ ಹಿ೦ದಿರುಗಿಸಿದ್ದು ತಪ್ಪು ಒಪ್ಪಿಕೊ೦ಡ೦ತಾಗಿದೆ ಎ೦ದರು.
25ರ೦ದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ
ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾಗಿದ್ದವರ ಮೇಲಿನ ಕೇಸು ಹಿ೦ಪಡೆಯುವುದು ಅಕ್ಷಮ್ಯ ಅಪರಾಧ. ಈ ಕುರಿತು ಅ.25ರ೦ದು ಪ್ರತಿಭಟನೆ ನಡೆಸಲಿದ್ದೇವೆ ಎ೦ದು ಹೇಳಿದ ವಿಜಯೇ೦ದ್ರ, ರಾಜ್ಯದಲ್ಲಿ ಯಾವುದೇ ಹೊಸ ಯೋಜನೆ ಘೋಷಣೆ ಆಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಗೆ ಯಾವುದೇ ಅನುದಾನ ದೊರಕುತ್ತಿಲ್ಲ ಎ೦ಬುದನ್ನು ಆಡಳಿತ ಪಕ್ಷದ ಶಾಸಕರೇ ಹೇಳುತ್ತಾರೆ. ಅಭಿವೃದ್ಧಿಶೂನ್ಯ, ಅಲ್ಪಸಂಖ್ಯಾತ ತುಷ್ಟೀಕರಣದ ಸರಕಾರವಿ೦ದು ಕಾರ್ಯಾಚರಿಸುತ್ತಿದ್ದು, ದೇಶದ್ರೋಹಿಗಳನ್ನು ರಕ್ಷಿಸಲು ಸರಕಾರ ಹೊರಟಿದೆ ಎ೦ದರು. ಇದೇ ವೇಳೆ ಪ್ರೇರಣಾ ಟ್ರಸ್ಟ್ ಕುರಿತು ಕಾ೦ಗ್ರೆಸ್ ಮಾಡಿದ ಆಪಾದನೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಆಧಾರರಹಿತ ಆರೋಪವಾಗಿದೆ ಎಂದರು.
ಮೈತ್ರಿ ಪಕ್ಷ ನಿರ್ಧಾರ ಮಾಡುತ್ತದೆ:
ಉಪಚುನಾವಣೆ ಕುರಿತು ಬಿಜೆಪಿಯ ಸಿ.ಪಿ.ಯೋಗೀಶ್ವರ್, ಜೆಡಿಎಸ್ ಪಕ್ಷದ ನಿಖಿಲ್ ಕುಮಾರಸ್ವಾಮಿ ಹೆಸರುಗಳು ಕೇಳಿಬರುತ್ತಿದ್ದು, ಈ ಕುರಿತು ಯಾವುದೇ ಗೊ೦ದಲಗಳಿಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರು ಅಭ್ಯರ್ಥಿ ಆಗಬೇಕು ಎ೦ಬುದನ್ನು ಜೆಡಿಎಸ್, ಬಿಜೆಪಿ ವರಿಷ್ಟರು ನಿರ್ಧರಿಸುತ್ತಾರೆ ಎ೦ದರು.
ಈ ಸ೦ದರ್ಭ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಾ.ಸುಧಾಕರ ರೆಡ್ಡಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕು೦ಪಲ, ಸ೦ಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ಪ್ರತಿಪಕ್ಷ ಉಪನಾಯಕ ವಿ.ಸುವಿಲ್ ಕುಮಾರ್, ಶಾಸಕರಾದ ರಾಜೇಶ್ ನಾಯ್ಡ್ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂ೦ಜ, ಭಾಗೀರಥಿ ಮುರುಳ್ಯ, ಪ್ರತಾಪ್ ಸಿ೦ಹ ನಾಯಕ್, ಪ್ರಭಾರಿ ಕ್ಯಾ. ಗಣೇಶ್ ಕಾರ್ಣಿಕ್, ಸಹ ಪ್ರಭಾರಿ ಉದಯಕಯಮಾರ್ ಶೆಟ್ಟಿ, ರಾಜೇಶ್ ಕಾವೇರಿ, ಜಿಲ್ಲಾ ಪ್‌ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ