ಏತಡ್ಕ: "ದೇವಸ್ಥಾನಗಳಲ್ಲಿ ನಾವು ಮಾಡುವ ಶ್ರಮದಾನವು ಒಂದು ಶ್ರೇಷ್ಠ ಸೇವೆ ಎಂದು ಪರಿಗಣಿಸ ಬೇಕು. ರಾಮಸೇತುವೆ ಸಂದರ್ಭದಲ್ಲಿ ಅಳಿಲು ಮಾಡಿದ ಸೇವೆಯಂತೆ. ಸೇವಾ ಮನೋಭಾವದ ಮೂಲ ನಮ್ಮ ದೇವಾಲಯಗಳು. ಭಕ್ತಿ ಶ್ರದ್ಧೆ, ಶ್ರಮವೇ ಬಂಡವಾಳ" ಎಂದು ಸಾಮಾಜಿಕ ನೇತಾರ ಪತ್ತಡ್ಕ ರಾಧಾಕೃಷ್ಣ ಭಟ್ ಮೊದಲ 'ಶಿವಾರ್ಪಣಂ ಶ್ರಮದಾನ' ಕಾರ್ಯಕ್ರಮದ ಸಭೆಯಲ್ಲಿ ನುಡಿದರು.
ಹಂಚು ಒಂದನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ. ಶಾಮ ಭಟ್ಟರಿಗೆ ನೀಡುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ವೈ. ಶಾಮ ಭಟ್ಟರು ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಸ್ಥಳೀಯ ಪ್ರಮುಖರಾದ ಶ್ರೀಮತಿ ಲಾವಣ್ಯ, ಶಶಿಕಲಾ ಈಳಂತೋಡಿ, ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಕೆ.ಕೆ, ಖಜಾಂಜಿ ವೈ.ವಿ. ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಸಮಿತಿಯ ಸಂಯೋಜಕರಲ್ಲೊಬ್ಬರಾದ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಊರಿನ ಅನೇಕ ಭಗವದ್ಭಕ್ತರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ