'ಅಭಿನಯ ಸಾಗರ' ವತಿಯಿಂದ ನೆನಪಿನ ರಂಗ ಸಂಭ್ರಮ ನಾಟಕೋತ್ಸವ

Upayuktha
0


ಸಾಗರ: ಸಾಗರದ 'ಅಭಿನಯ' ವತಿಯಿಂದ ನೆನಪಿನ ರಂಗ ಸಂಭ್ರಮ ನಾಟಕೋತ್ಸವದ ಏಳನೇ ಮತ್ತು ಕೊನೆಯ ದಿನದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.


ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಅಭಿನಯ ಸಾಗರ, ಕಾಗೋಡು ರಂಗಮಂಚ, ಜೋಶಿ ಫೌಂಡೇಶನ್, ನಮ್ ಸಮಾಚಾರ ಪಾಕ್ಷಿಕ ಪತ್ರಿಕೆ ಸಾಗರ, ಉದಯ ಕಲಾವಿದರು ಸಾಗರ, ಇವರೆಲ್ಲರ ಸಹಯೋಗದೊಂದಿಗೆ ಅಕ್ಟೋಬರ್ 21ರಿಂದ 27ರವರೆಗೆ 7 ದಿನಗಳ ದಿವಂಗತ ಎನ್ ಆರ್ ಮಾಸೂರು, ಕಾಗೋಡು ಅಣ್ಣಾಜಿ ಹಾಗೂ ಯೇಸು ಪ್ರಕಾಶ್ ಅವರ ಸ್ಮರಣಾರ್ಥ ನಡೆದ ನೆನಪಿನ ರಂಗ ಸಂಭ್ರಮ ನಾಟಕೋತ್ಸವ ನಿನ್ನೆಗೆ ಮುಕ್ತಾಯಗೊಂಡಿತು.


ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸಾಗರ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಡಾ. ಜಿ.ಎಸ್. ಭಟ್, ಟಾಕಪ್ಪ, ಸಿ.ಟಿ. ಬ್ರಹ್ಮಾಚಾರ್, ಐ.ಎನ್. ಸುರೇಶ್ ಬಾಬು, ಗೌತಮ್ ಪಿ. ಎಸ್., ವಿ. ಶಂಕರ್, ಟಿ.ಎಸ್. ರಾಘಣ್ಣ, ಪ್ರಸನ್ನ ಕುಮಾರ್, ಶ್ರೀಮತಿ ಶೈಲಜಾ ಪ್ರಕಾಶ್, ಶ್ರೀಮತಿ ಅನುಸೂಯ, ಗೋಪಿ ದೀಕ್ಷಿತ್, ಉಮೇಶ್ ಹಿರೇನಲ್ಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಎಂ. ಎಸ್. ಚಂದ್ರಶೇಖರ್, ದೇವೇಂದ್ರ ಬೆಳೆಯೂರು, ಅರುಣ್ ಘಾಟೆ, ಕೆ. ಈಶ್ವರ ನಾಯ್ಕ ಕುಗ್ವೆ, ಮೇಕಪ್ ಸೋಮಣ್ಣ ಹಾಗೂ ನಾಗರಾಜ್ ಸೂರನಗದ್ದೆ ಇವರನ್ನು ಇವರ ರಂಗಭೂಮಿಯ ಸೇವೆಗೆ ಅಭಿನಂದಿಸಲಾಯಿತು.


ಇದೇ ಸಂದರ್ಭದಲ್ಲಿ "ರಂಗ ಸಾಧಕ ಸಾಗರಿಕರು" ಪುಸ್ತಕಕ್ಕೆ ಸಹಕರಿಸಿದ ಡಾ. ಪ್ರಭಾಕರ ರಾವ್, "ಏಸು ನೆನೆಹುಗಳ ಹೊತ್ತು" ಪುಸ್ತಕ ಲೋಕಾರ್ಪಣೆಗೊಳ್ಳಲು ಸಹಕರಿಸಿದ ಡಾ. ಸರ್ಫರಾಜ್ ಚಂದ್ರಗುತ್ತಿ, ನಾಟಕೋತ್ಸವಕ್ಕೆ ಸಹಕರಿಸಿದ ಎಂ.ರಾಘವೇಂದ್ರ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಿದ ನಾಗರಾಜ್ ಶಿರಸಿ ಇವರನ್ನು ಸಹ ಗೌರವಿಸಲಾಯಿತು.


ಶ್ರೀಮತಿ ಪುಷ್ಪ ರಾಘವೇಂದ್ರ ಸ್ವಾಗತಿಸಿದರು. ಅಬಸೇ ದಿನೇಶ್ ಕುಮಾರ್ ಜೋಶಿ ವಂದಿಸಿದರು, ಕೌಶಿಕ್ ಕಾನುಗೋಡು ನಿರೂಪಿಸಿದರು. ಸಮಾರೋಪದ ಕಾರ್ಯಕ್ರಮದ ನಂತರ ಕನ್ನಡ ಕಲಾ ಕೇಂದ್ರ ಮುಂಬೈ (ರಿ.) ಇವರ "ಬಿಸಿಲು ಬೆಳದಿಂಗಳು" ನಾಟಕ ಪ್ರದರ್ಶನಗೊಂಡಿತು. ಸಭಾಂಗಣ ಪ್ರೇಕ್ಷಕರಿಂದ ತುಂಬಿತ್ತು. ಏಳು ದಿನಗಳ ಅದ್ದೂರಿ ನಾಟಕೋತ್ಸವ ನಿನ್ನೆಗೆ ಕೊನೆಗೊಂಡಿತು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top