ರಾಮಾಯಣ ಸದಾ ಆದರ್ಶನೀಯ

Upayuktha
0


ಲಂಕಾ ಸಾಮ್ರಾಜ್ಯದ ದಿಗ್ವಿಜಯದ ನಂತರ ಶ್ರೀರಾಮಚಂದ್ರನು ಅಯೋಧ್ಯೆಯ ಅರಸನಾಗುತ್ತಾನೆ. ಈ ಸಮಯ ಒಮ್ಮೆ ಸಾಕ್ಷಾತ್ ಯಮರಾಜನು ಶ್ರೀರಾಮನ ದರ್ಶನವನ್ನು ಪಡೆಯಲು ಹಾಗೂ ಪ್ರಮುಖವಾದದೊಂದು ವಿಷಯದ ಕುರಿತು ಚರ್ಚಿಸಲು ಅರಮನೆಗೆ ಆಗಮಿಸುತ್ತಾನೆ. ಚರ್ಚಾ ವಿಷಯವನ್ನು ಪ್ರಾರಂಭಿಸುವ ಮುನ್ನ ನಮ್ಮಿಬ್ಬರ ಮಾತುಕತೆ ಮುಗಿಯುವ ಮೊದಲು ಯಾರೇ ಅಡ್ಡಿಯುಂಟು ಮಾಡಿದರು, ಆ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಬೇಕು ಎಂದು ಪರಮಾತ್ಮ ರಾಮನಿಂದ ವಚನವನ್ನು ಪಡೆದನು ಯಮಧರ್ಮ. 


ವಚನಭ್ರಷ್ಟನಾಗುವನೇ ಶ್ರೀರಾಮ ಆಗಲಿ ಎಂದು ವಚನವಿತ್ತನು. ಲಕ್ಷ್ಮಣನನ್ನು ಕರೆದು ಸಂಭಾಷಣೆಗೆ ತೊಂದರೆಯಾಗದಂತೆ ದ್ವಾರಪಾಲಕನಾಗು ಎಂದು ಸಹೋದರನಿಗೆ ಆದೇಶವಿತ್ತನು. ಅಣ್ಣನ ಆಜ್ಞೆಯನುಸಾರ ಲಕ್ಷ್ಮಣನೀಗಾ ದ್ವಾರಪಾಲಕ. ಕೆಲಹೊತ್ತಿನ ಬಳಿಕ ದೂರ್ವಾಸ ಮುನಿಗಳು ಸ್ಥಳಕ್ಕೆ ಆಗಮಿಸಿದರು. ತನ್ನಾಗಮನದ ಕುರಿತು ರಾಮನಿಗೆ ತಿಳಿಸಲು ಲಕ್ಷ್ಮಣನನ್ನು ಕೇಳಿದರು. ವಿನಯದಿಂದ ನಿರಾಕರಿಸಿದ ಲಕ್ಷ್ಮಣ. ವಿಧಿಯಾಟ ಎಂದರೆ ಇದುವೇ?ಕೋಪಗೊಂಡ ದೂರ್ವಾಸ ಮುನಿಗಳು ಇಡೀ ಅಯೋಧ್ಯೆಗೆ ಶಾಪ ನೀಡುವೆನೆಂದು ಹೇಳಿದರು. ಅಯೋಧ್ಯೆಯನ್ನು ರಕ್ಷಿಸುವ ಸಲುವಾಗಿ ಲಕ್ಷ್ಮಣ ತನ್ನ ಪ್ರಾಣವನ್ನು ತ್ಯಾಗ ಮಾಡಲು ನಿರ್ಧರಿಸಿದನು. ಕೋಣೆಯ ಒಳಹೊಕ್ಕ ಲಕ್ಷ್ಮಣನು ಅಣ್ಣನ ಅಣತಿಯನ್ನು ಮೀರಿದನು.


ರಾಮನು ಕೊಟ್ಟ ಮಾತಿನಂತೆ ಲಕ್ಷ್ಮಣನಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಬೇಕಿರುವುದರಿಂದ ತೀವ್ರ ವ್ಯಥೆಪಟ್ಟನು.ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಗುರು ವಶಿಷ್ಠರಲ್ಲಿ ಬೇರೆ ದಾರಿ ತೋರುವಂತೆ ಬೇಡಿದನು.ಗುರು ವಶಿಷ್ಠರು ಈಗ ಉಳಿದಿರುವ ದಾರಿ ಒಂದೇ .ನಿನ್ನಿಂದ ಲಕ್ಷ್ಮಣ ದೂರ ಇರಬೇಕು ಅಥವಾ ಸಾವನ್ನು ಅಪ್ಪಬೇಕು ಎರಡೇ ದಾರಿ ಇರುವುದು ಎಂದರು. ಇದನ್ನು ತಿಳಿದ ಲಕ್ಷ್ಮಣ ತಾನು ಅಣ್ಣನಿಂದ ಜೀವನಪರ್ಯಂತ ದೂರ ಉಳಿಯುವ ಬದಲು, ಸಾವನ್ನು ಒಪ್ಪಿಕೊಳ್ಳುವುದೇ ಒಳಿತು ಎಂದು ನಿರ್ಧರಿಸಿದ. ಕೂಡಲೇ ಜಲಸಮಾಧಿಯಾದ ಲಕ್ಷ್ಮಣ.  


ಇದೇ ಅಲ್ಲವಾ ತ್ಯಾಗದ ಸಂಕೇತ. ವನವಾಸ ಯುದ್ಧಾದಿಯೆಲ್ಲವನ್ನು ಮುಗಿಸಿ ಸುಖಜೀವನ ಪ್ರಾಪ್ತವಾದ ಬಳಿಕ ತನಗಾಗಿ ಅಲ್ಲದೇ ಸಾಮ್ರಾಜ್ಯದ ಉದ್ಧಾರಕ್ಕಾಗಿ ತ್ಯಾಗ ಮಾಡುವುದು ರಾಮನಿಗಾಗಲಿ ಹಾಗೂ ಅವನ ಸಹೋದರ ಲಕ್ಷ್ಮಣನಿಗಾಗಲಿ ಹೊಸದೇನಲ್ಲ.ಅಣ್ಣನಿಗಾಗಿ, ಸಾಮ್ರಾಜ್ಯದ ಒಳಿತಿಗಾಗಿ ತನ್ನ ಪ್ರಾಣವನ್ನು ಬಲಿಕೊಟ್ಟ ಲಕ್ಷ್ಮಣ ಸರ್ವರಿಗೂ ಅನುಕರಣನೀಯ. ಇದು ಕೇವಲ ರಾಮಾಯಣದ ಒಂದು ಘಟನೆಯಷ್ಟೇ, ರಾಮಾಯಣದ ಒಳಹೊಕ್ಕು ನೋಡಿದಾಗ ಇಂತಹ ಮೌಲ್ಯಯುತ ಘಟನೆಗಳು ಅವೆಷ್ಟೋ .ತ್ಯಾಗ ಮಾತ್ರವಲ್ಲ ನೈತಿಕ ಮೌಲ್ಯ ತಿಳಿಯಲು ರಾಮಾಯಣದ ಅಧ್ಯಯನ ಪರಿಪಾಠ ಮಾಡಬೇಕಿದೆ. ರಾಮನ ನೆರಳಿನಲ್ಲಿ ಬದುಕಿದ ಲಕ್ಷ್ಮಣ ಕೆಟ್ಟವನಾಗುವುದುಂಟೆ?. ಸಾಮ್ರಾಜ್ಯಕ್ಕಾಗಿ ಪ್ರಾಣದಾನ ಮಾಡಿದ ಲಕ್ಷ್ಮಣ ನಿಜಕ್ಕೂ ಧನ್ಯ. 


ಇದೆ ಅಲ್ಲವಾ ನಿಸ್ವಾರ್ಥ. ಸ್ವಾರ್ಥಕ್ಕಾಗಿ ಮನುಷ್ಯ ಎಂತಹ ಕೆಲಸ ಮಾಡಲು ಹೇಸುವುದಿಲ್ಲ. ಒಮ್ಮೆ ರಾಮಾಯಣದ ಕಡೆಗೆ ಕಣ್ಣು ಹಾಯಿಸಿದರೆ ಅವನು ನಿಜಕ್ಕೂ ನಿಸ್ವಾರ್ಥದ ಹಾದಿ ಹಿಡಿಯುತ್ತಾನೆ. ಅದವೇ ರಾಮಾಯಣಕ್ಕೆ ಇರುವ ಶಕ್ತಿ. ನಿಜವಾದ ಯಶಸ್ಸು ಅಡಗಿರುವುದು ತ್ಯಾಗದ ಹಿಂದೆಯೇ. ತ್ಯಾಗ ಮಾಡಿ ಮರಣಿಸಿದ ಲಕ್ಷ್ಮಣ ನಿಜಕ್ಕೂ ದೊಡ್ಡವನಾದ.ಹೂವಿನೊಂದಿಗೆ ನಾರು ಸ್ವರ್ಗಕ್ಕೆ ಹೋದಂತೆ ರಾಮನ ನೆರಳಿನಲ್ಲಿ ನೈತಿಕತೆಯನ್ನು ಕಲಿತ ಲಕ್ಷ್ಮಣ ಸಹ ಇಂದಿಗೂ ಪೂಜಿತನಾದ, ಆದರ್ಶನೀಯ ನಾದ.  ರಾಮಾಯಣದ ಇಂತಹ ಹತ್ತು ಹಲವು ಘಟನೆಗಳು ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳು ಸದಾದರ್ಶನೀಯ. 


-ದೀಪಶ್ರೀ ಎಸ್ ಕೂಡ್ಲಿಗಿ 

ಕಥೆಗಾರ್ತಿ ಹಾಗೂ ಹವ್ಯಾಸಿ ಬರಹಗಾರ್ತಿ 

ಕೂಡ್ಲಿಗಿ ತಾಲ್ಲೂಕು 

ವಿಜಯನಗರ ಜಿಲ್ಲೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top