ಅಕ್ಟೋಬರ್ 28, 29 : ಅಂಬಿಕಾ ವಿದ್ಯಾಲಯ ಹಾಗೂ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ

Upayuktha
0




ಪುತ್ತೂರು:
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್  ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಾರ್ಷಿಕೋತ್ಸವ ಪ್ರತಿಭಾತರಂಗಿಣಿ – 2024 ಅಕ್ಟೋಬರ್ 28ರಂದು ನಡೆಯಲಿದೆ. ಮಂಗಳೂರಿನ ಕರ್ನಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ರಾಜ ಬಿ.ಎಸ್. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 


ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ.ದೀಪಕ್ ರೈ, ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಆತ್ಮಶ್ರೀ, ಶಾಲಾ ಪ್ರಾಚಾರ್ಯೆ ಮಾಲತಿ ಡಿ, ವಿದ್ಯಾರ್ಥಿ ನಾಯಕರಾದ ಬಿ.ಆರ್.ಸೂರ್ಯ ಹಾಗೂ ಅನಘಾ ವಿ.ಪಿ ಉಪಸ್ಥಿತರಿರುವರು. ಅಕ್ಟೋಬರ್ 29ರಂದು ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ ಮಾನಸೋಲ್ಲಾಸ – 2024 ನಡೆಯಲಿದ್ದು, ಭಾರತೀಯ ರಕ್ಷಣಾ ಸಚಿವಾಲಯದ ಉದ್ಯೋಗಿ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಶಿವರಾಜ್ಎಂ  ಹಾಗೂ ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 


ಎರಡೂ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಶಿವರಾಮ ಆಳ್ವಾ ಹಾಗೂ ಪಿ.ಸತ್ಯನಾರಾಯಣ ಶರ್ಮ, ಸಂಸ್ಥೆಗಳ ಪ್ರಾಚಾರ್ಯರಾದ ಸತ್ಯಜಿತ್  ಉಪಾಧ್ಯಾಯ ಹಾಗೂ ಸುಚಿತ್ರಾ ಪ್ರಭು, ವಿದ್ಯಾರ್ಥಿ ನಾಯಕರಾದ ಪವನ್ ಭಾರದ್ವಾಜ್, ಬಿ.ಬಿ.ರಿತ್ವಿಕ್ ಗೌಡ, ಸಂಜಯ್ ಎನ್ ಹಾಗೂ ತನ್ಮಯ್  ಟಿ.ಎಂ ಉಪಸ್ಥಿತರಿರುವರು.


ಎರಡೂ ದಿನಗಳ ಕಾರ್ಯಕ್ರಮಗಳಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿರುವರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top