ಆರ್ಕಿಡ್ ಸಸ್ಯಗಳು ಪರಿಸರದ ಆರೋಗ್ಯ ಸೂಚಿಸುತ್ತವೆ: ಪಾಂಡೀರ ಕೌಶಿಕ್ ಕಾವೇರಪ್ಪ

Upayuktha
0




ಪುತ್ತೂರು: ಭಾರತದಲ್ಲಿ ಆರ್ಕಿಡ್ ಗಳು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಆರ್ಕಿಡ್ ಗಿಡಗಳು ಸಸ್ಯಗಳ ಜಾತಿಯಲ್ಲಿ ವಿಶೇಷವಾಗಿದ್ದು, ಎರಡನೆಯ ಅತಿ ಹೆಚ್ಚು ಪ್ರಬೇಧಗಳನ್ನು ಹೊಂದಿರುವ ಸಸ್ಯಗಳಾಗಿವೆ. ಆರ್ಕಿಡ್ ಸಸ್ಯಗಳಲ್ಲಿ ಪರಾಗಸ್ಪರ್ಶವು ಕಷ್ಟಕರವಾದ ಕ್ರಿಯೆಯಾಗಿದ್ದು, ಇವುಗಳನ್ನು ಶ್ವಾಸಕೋಶ ಮತ್ತು ಕಿಡ್ನಿಗಳ ಸಮಸ್ಯೆಗೆ ಔಷಧಿಯಾಗಿ ಬಳಸಲಾಗುತ್ತದೆ ಮತ್ತು ಆರ್ಕಿಡ್ ಸಸ್ಯಗಳು ಮಾಲಿನ್ಯ ಇರುವ ಕಡೆಗಳಲ್ಲಿ ಕಾಣಸಿಗುವುದಿಲ್ಲ ಎಂದು ಪರಿಸರವಾದಿ ಪಾಂಡೀರ ಕೌಶಿಕ್  ಕಾವೇರಪ್ಪ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ನೇಚರ್ ಕ್ಲಬ್, ಸೈನ್ಸ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದ ಕೊಡಗಿನ ವರ್ಲ್ಡ್ ಆರ್ಕಿಡ್ ಗಳ ಕುರಿತ ಕನ್ನಡದ ಮೊದಲ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ವಿಜ್ಞಾನ ವಿಭಾಗದ ಡೀನ್ ಮತ್ತು ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ. ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀಕೃಷ್ಣ ಗಣರಾಜ್ ಭಟ್,  ನೇಚರ್ ಕ್ಲಬ್ ನ ಸಂಯೋಜಕ, ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕ ಸುಹಾಸ್ ಕೃಷ್ಣ ಉಪಸ್ಥಿತರಿದ್ದರು.


ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಸೌಮಿತ್ರ. ಕೆ ಸಹಕರಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಮನಸ್ವಿನಿ ಸ್ವಾಗತಿಸಿ, ಅಶ್ವಥಿ ವಂದಿಸಿ, ಧನ್ಯಶ್ರೀ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top