ನವರಾತ್ರಿ ವಿಶೇಷ: ಸವದತ್ತಿ ಎಲ್ಲಮ್ಮ ಅಥವಾ ಎಲ್ಲಮ್ಮನ ಗುಡ್ಡ

Upayuktha
0


ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿಯಲ್ಲಿ ಎಲ್ಲಮ್ಮ ದೇವಿಯ ಗುಡ್ಡವಿದ್ದು ಇಲ್ಲೆ ದೇವಿಯು ಬಹಳ ಪ್ರಸಿದ್ಧಳಾಗಿದ್ದಾಳೆ. ಕರ್ನಾಟಕ ಮಹಾರಾಷ್ಟ್ರ ಪ್ರದೇಶ, ಆಂಧ್ರಪ್ರದೇಶದ ಅನೇಕ ಜನರ ಕುಲದೇವಿಯಾಗಿದ್ದಾಳೆ. ಇವಳನ್ನು ಏಳು ಕೊಳದ ಎಲ್ಲಮ್ಮ ಎಂದು ಕೂಡ ಕರೆಯುತ್ತಾರೆ. ಮಲಪ್ರಭಾ ನದಿಯ ದಡದಲ್ಲಿರುವ ಸವದತ್ತಿಯಲ್ಲಿ ದೇವಿಯು ರೇಣುಕಾ ಮಾತೆ ಅಥವಾ ಎಲ್ಲಮ್ಮಳಾಗಿ ಆರಾಧಿಸಲ್ಪಡುತ್ತಾಳೆ. ದಕ್ಷಿಣ ಭಾರತದ ಅತ್ಯಧಿಕ ಭಕ್ತರು ಬರುವ ಕ್ಷೇತ್ರಗಳಲ್ಲಿ ಒಂದಾಗಿದೆ.


ಪುರಾಣಗಳಲ್ಲಿ ಉಲ್ಲೇಖವಿರುವ ಈ ಕ್ಷೇತ್ರವು ವಿಷ್ಣುವಿನ ಅವತಾರವಾದ ಪರಶುರಾಮನ ತಾಯಿ ರೇಣುಕಾ ದೇವಿಯಾಗಿದ್ದಾಳೆ. ರಾಜಕುಮಾರಿಯಾಗಿ ಹುಟ್ಟಿದ ರೇಣುಕಾದೇವಿಯು ಸಪ್ತರ್ಷಿಗಳಲ್ಲಿ ಒಬ್ಬರಾದ ಜಮದಗ್ನಿ ಋಷಿಗಳನ್ನು ಮದುವೆಯಾಗಿ ಪರಶುರಾಮ ಮತ್ತು 4 ಜನ ಮಕ್ಕಳ ತಾಯಿಯಾಗಿ ಜಮಗ್ನಿ ಋಷಿಗಳ ನಿತ್ಯದ ಕಾರ್ಯಗಳಿದೆ ಸಹಕಾರಿಯಾಗಿರುತ್ತಿದ್ದಳು, ಮರಳನ್ನು ಮಡಕೆಯನ್ನಾಗಿ ಮಾಡಿಕೊಂಡು ಹಾವನ್ನು ಸಿಂಬೆಯನ್ನಾಗಿ ಮಾಡಿಕೊಂಡು ನೀರನ್ನು ತರುತ್ತಿದ್ದಳು. ಒಮ್ಮೆ ನೀರನ್ನು ತರಲು ನದೀತೀರಕ್ಕೆ ಹೋದಾಗ ಗಂಧರ್ವ ಮತ್ತು ಗಂಧರ್ವ ಪತ್ನಿಯರ ಜಲಕ್ರೀಡೆಯನ್ನು ನೋಡಿ ಪರವಶಳಾಗುತ್ತಾಳೆ. ಆಗ ಮರಳ ಮಡಿಕೆ ಕರಗಿ ಹೋಗುತ್ತದೆ. ಕೊಡವು ಇಲ್ಲದೇ ನೀರು ಇಲ್ಲದೇ ಮರಳಿ ಬಂದ ಪತ್ನಿಯ ಮೇಲೆ ಮೊದಲೇ ಕೋಪಿಷ್ಠರಾದ ಋಷಿಗಳು ಸಿಟ್ಟಾಗಿ ಪತ್ನಿಗೆ ಶಾಪವನ್ನು ನೀಡಿ ಬಿಳುಪು ರೋಗ ಬರುವಂತೆ ಶಾಪ ನೀಡುತ್ತಾರೆ. ಮುಂದೆ ಸಿದ್ಧರು ಆ ಪ್ರದೇಶಕ್ಕೆ ಬಂದಾಗ ಜೋಗುಳ ಬಾವಿಯ ನೀರಿನಲ್ಲಿ ಅರಿಶಿನದಿಂದ ಸ್ನಾನವನ್ನು ಮಾಡಲು ಹೇಳುತ್ತಾರೆ. ಸಿದ್ದರು ಹೇಳಿದಂತೆ ಸ್ನಾನ ಮಾಡಿದಾಗ ರೋಗವು ನಿವಾರಣೆಯಾಗುತ್ತದೆ.


ಆದರೆ ಕೋಪ ಕಡಿಮೆಯಾಗದ ಜಮದಗ್ನಿಯು ತಾಯಿಯ ಶಿರಚ್ಛೇದ ಮಾಡೆಂದು ಆಜ್ಞೆಯನ್ನು ಮಾಡುತ್ತಾರೆ. ಆದರೆ 4 ಜನ ಮಕ್ಕಳು ಮಾಡುವುದಿಲ್ಲ. ಪರಶುರಾಮರು ತಂದೆಯ ಆಜ್ಞೆಯಂತೆ ಶಿಚ್ಛೇದನ ಮಾಡಿ, ಸಂತಸಗೊಂಡ ಪಿತೃವಿನ ಆಶೀರ್ವಾದವು ವರ ಬೇಡುವಾಗ, ತಾಯಿ ಹಾಗೂ ಸಹೋದರರ ಜೀವವನ್ನು ವರದ ರೂಪದಲ್ಲಿ ಹಿಂದಿರುಗಿ ಬದುಕಿಸಿಕೊಳ್ಳುತ್ತಾರೆ. ಕಾಮಧೇನುವಿನ ಆಸೆಗಾಗಿ ಕಾರ್ತ್ಯವೀರ್ಯಾರ್ಜುನನು ಜಮದಗ್ನಿ ಋಷಿಗಳನ್ನು ಹತ್ಯೆಗೈದಾಗ ರೇಣುಕಾ ದೇವಿಯು ಕೂಡ ಸತೀ ಹೋಗುತ್ತಾಳೆ. ಇಂತಹ ರೇಣುಕಾ ದೇವಿಯೇ ಸವದತ್ತಿಯ ಮಾತೆಯಾಗಿದ್ದಾಳೆ. ಸವದತ್ತಿಯ ಬಳಿಯ ಜೋಗುಳ ಬಾವಿಯ ಬಳಿ ಸೇವಿಯು ನೆಲೆಸಿದ್ದಾಳೆ ಎನ್ನುವುದು ಸ್ಥಳ ಪುರಾಣವಾಗಿದೆ. ಸವದತ್ತಿಯ ಸಮೀಪ ಏಳು ಗುಡ್ಡಗಳು ಮತ್ತು ಏಳು ತೀರ್ಥಗಳು ಇದ್ದು ಈ ಪ್ರದೇಶದಲ್ಲಿ ದೇವಿಯು ಸಂಚರಿಸುತ್ತಾಳೆಂಬ ನಂಬಿಕೆ ಇದೆ. ಆದ್ದರಿಂದ ಅವಳನ್ನು ಏಳುಕೊಳಗಳ ದೇವಿಯನ್ನುತ್ತಾರೆ. ಅರಿಶಿನವು ದೇವಿಗೆ ಅತೀ ಪ್ರಿಯವಾದುದು. ಅದಕ್ಕೆ ದೇವಿಯ ಭಕ್ತರು ಅವಳ ಅರಿಶಿನದ ಭಂಡಾರವನ್ನು ಧರಿಸುತ್ತಾರೆ.


ಸಂತಾನವಿಲ್ಲದವರು ಇಲ್ಲಿನ ಅರಿಶಿನ ಬಾವಿಯಲ್ಲಿ ಸ್ನಾನ ಮಾಡಿ ಪರಶುರಾಮ ದೇವರ ತುಟ್ಟಿಲನ್ನು ತೂಗಿದರೆ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಒಂದು ವರ್ಷದಲ್ಲಿ ಏಳು ಬಾರಿ ಜಾತ್ರೆ ನಡೆಯುವ ಕ್ಷೇತ್ರ ಇದಾಗಿದೆ. ದವನದ ಹುಣ್ಣಿಮೆ, ಮಹಾನವಮಿ, ಶೀಗೆ ಹುಣ್ಣಿಮೆ, ಹೊಸ್ತಿಲ ಹುಣ್ಣಿಮೆ, ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಗಳಂದು ಇಲ್ಲಿ ಜಾತ್ರೆಯು ನಡೆಯುತ್ತದೆ.


ರಾಮ ಲಿಂಗ ಬೆಟ್ಟದ ಪ್ರದೇಶದಲ್ಲಿ ಇರುವ ಈ ದೇವಾಲಯ ಬಗ್ಗೆ, ಪುರಾತತ್ವ ಇಲಾಖೆಯ ಪ್ರಕಾರ ಸವದತ್ತಿಯ ದೇವಾಲಯವನ್ನು 1514ರ ಸಮಯದಲ್ಲಿ ಬೊಮಪ್ಪ ನಾಯಕ ರಾಯಬಾಗ  ನಿರ್ಮಿಸಲಾಗಿದೆ ಅಥವಾ ಚಾಲುಕ್ಯರು ಅಥವಾ ರಾಷ್ಟ್ರಕೂಟರ ಸಮಯದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಎಲ್ಲಮ್ಮ ದೇವಿಯು ಸಮೃದ್ಧಿ ಹಾಗೂ ಸಂತಾನ ಪ್ರದಾಯಕಳಾಗಿದ್ದಾಳೆ.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top